ಫ್ಯಾಕ್ಟ್ಚೆಕ್ : ಮುಸ್ಲಿಂ ಯುವಕರು ದೇವಸ್ಥಾನದ ಪೂಜಾರಿ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿದರೆ?
ಕ್ರಿಕೆಟ್ ಬ್ಯಾಟ್ಅನ್ನು ಹೇಗೆಲ್ಲಾ ಬಳಸಬಹುದು ನೋಡಿ. ಇದನ್ನು ಕ್ರಿಕೆಟ್ ಆಡಲು ಬಳಸುವುದರ ಜೊತೆಗೆ, ಈ ಜಗತ್ತಿನಲ್ಲಿ ಕೆಲವು ಜನರು ಬೇರೆ ರೀತಿಯಲ್ಲಿ ಬಳಸಲು ಪ್ರಾರಂಭಿಸಿದ್ದಾರೆ. ವ್ಯಕ್ತಿಯೊಬ್ಬ ಕ್ರಿಕೆಟ್ ಬ್ಯಾಟ್ನಿಂದ ಮತ್ತೊಬ್ಬ ವ್ಯಕ್ತಿಗೆ ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಗಿಲಿನ ಮೂಲೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ನಿರ್ದಯವಾಗಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆಯುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
“ಹಿಂದುಸ್ಥಾನದಲ್ಲಿ ಹಿಂದುಗಳ ಸ್ಥಿತಿ ನೋಡಿ. ಈ ವೀಡಿಯೊ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ. ದಯವಿಟ್ಟು ಈ ವೀಡಿಯೋ ಮಾಡಿದವರೆಲ್ಲರ ವಿರುದ್ಧ ಕೇಸ್ ಬುಕ್ ಮಾಡಿ ಮತ್ತು ಆತನನ್ನು ಪತ್ತೆ ಹಚ್ಚಿ ನಮ್ಮ ಅರ್ಚಕನನ್ನು ಉಳಿಸುವ ತನಕ ಶೇರ್ ಮಾಡಿ. ಇದು ನಮ್ಮ ಹಿಂದೂ ಜನ್ಮಕ್ಕೆ ನಾವು ನೀಡುವ ಕೊಡುಗೆ. ಅರ್ಚಕನಿಗೆ ಈ ರೀತಿ ಥಳಿಸುತ್ತಿರುವುದನ್ನು ನೋಡಿ ಸಹಾಯ ಮಾಡಿ, ಈ ವಿಡಿಯೋ ತೆಗೆದವರನ್ನು, ಸುಮ್ಮನೆ ಬಿಡಬೇಡಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.

ಹಿಂದೂ ಅರ್ಚಕನನ್ನು ಮುಸ್ಲಿಂ ವ್ಯಕ್ತಿ ಅಮಾನವೀಯವಾಗಿ ಥಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್ಸುದ್ದಿ.ಕಾಂ ಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಿನಂತಿಸಿದ್ದಾರೆ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ವೈರಲ್ ವಿಡಿಯೋ 3 ನವೆಂಬರ್ 2020ರಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೈರಲ್ ವಿಡಿಯೊವನ್ನು ಬೂಮ್ ಫ್ಯಾಕ್ಟ್ಚೆಕ್ ಮಾಡಿದೆ.
ಬೂಮ್ ವರದಿಯ ಪ್ರಕಾರ “ಈ ಘಟನೆ ಹರಿಯಾಣದ ಫತಾಹಾಬಾದ್ ಜಿಲ್ಲೆಯ ಭಾಟ್ಟು ಕಲಾನ್ ಗ್ರಾಮದಿಂದ ಬಂದಿದೆ ಎಂದು ಉಲ್ಲೇಖಿಸಿ ಸುದ್ದಿ ವರದಿಗಳು ಕಂಡುಬಂದಿವೆ. ಈ ಘಟನೆ 2020 ನವೆಂಬರ್ 3 ರಂದು ಪುರುಷರ ಗುಂಪೊಂದು ಧಾಬಿ ಕಲಾನ್ ಗ್ರಾಮದ ದೇವಾಲಯದ ಅರ್ಚಕನ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿ ಘಟನೆಯನ್ನು ದಾಖಲಿಸಿದೆ. ಮಧ್ಯಪ್ರದೇಶದವರಾದ ಅರ್ಚಕರನ್ನು ಮಥುರಾದ ಆಸ್ಪತ್ರೆಗೆ ದಾಖಲಿಸಲಾಯಿತು. ದೇವಾಲಯದೊಳಗೆ ತಮ್ಮ ಬ್ಯಾಟ್ ಇರಿಸಿಕೊಳ್ಳಲು ನಿರಾಕರಿಸಿದ್ದರಿಂದ ಯುವಕರ ಗುಂಪು ಅರ್ಚಕರ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
A video of Haryana is being circulated as of West Bengal on WhatsApp and FB with a mischievous message. Legal action is being initiated.
Please do not forward the misleading video containing mischievous message#FakeNewsAlert pic.twitter.com/MCjN9TTs7R
— West Bengal Police (@WBPolice) November 5, 2020
ಕೆಲವು ಸುದ್ದಿ ವರದಿಗಳ ಪ್ರಕಾರ ದೇವಸ್ಥಾನದ ಅರ್ಚಕ ಮಹಿಳೆಗೆ ಮೊಬೈಲ್ ಮೂಲಕ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಸ್ಥಳೀಯರು ಅರ್ಚಕನ ಮೇಲೆ ದಾಳಿ ನಡೆಸಿದ್ದಾರೆ. (ಪೊಲೀಸ್ ಅಧಿಕಾರಿಗಳ ಹೇಳಿಕೆಯೇ ಬೇರೆ) ದಾಳಿಯಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಫಾಟೆಹಾಬಾದ್ ಪೊಲೀಸರ ಪರಿಶೀಲಿಸಿದ ಟ್ವಿಟ್ಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದ್ದಾರೆ.
ಭಟ್ಟು ಕಾಳನ್ ಪೊಲೀಸ್ ಠಾಣೆಯ SHO ಗೆ ಬೂಮ್ ಕರೆ ಮಾಡಿ ಘಟನೆ ಬಗೆಗ ಮಾಹಿತಿ ಪಡೆದುಕೊಂಡಿದ್ದು ಅದೇ ಗ್ರಾಮದದ್ದು ಎಂದು ಖಚಿತಪಡಿಸಿದ್ದರು. “ವಾಸ್ತವವಾಗಿ ದೇವಾಲಯದ ಸಮೀಪದಲ್ಲಿ ಆಟದ ಮೈದಾನವಿದೆ. ಕ್ರಿಕೆಟ್ ಆಟವಾಡುತ್ತಿದ್ದ ಹುಡುಗರು ತಮ್ಮ ಬ್ಯಾಟ್ ಮತ್ತು ಇತರ ಉಪಕರಣಗಳನ್ನು ದೇವಾಲಯದಲ್ಲಿ ಇರಿಸಿಕೊಳ್ಳಲು ಅರ್ಚಕನನ್ನು ಒತ್ತಾಯಿಸಿದ್ದಾರೆ ಆದರೆ ಅದನ್ನು ನಿರಾಕರಿಸಿದ್ದಾಗ, ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾರೆ”ಎಂದು SHO BOOM ಗೆ ತಿಳಿಸಿದರು.
ಆನ್ಲೈನ್ ಎಫ್ಐಆರ್ ಪ್ರತಿಯನ್ನು ಲಭ್ಯವಾಗಿದ್ದು ನವೆಂಬರ್ 3, 2020 ರಂದು ಮೂವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕೆಲವು ಫೇಸ್ಬುಕ್ ಪೋಸ್ಟ್ಗಳಲ್ಲಿ ಹಲ್ಲೆ ಮಾಡಿದವರನ್ನು ಮುಸ್ಲಿಮರೆಂದು ಹೇಳಿಕೊಂಡಿದ್ದಾರೆ, ಆದರೆ ಈ ಪ್ರತಿಪಾದನೆ ಸುಳ್ಳು ಎಂದು FIR ಪ್ರತಿಯಿಂದ ಬಹಿರಂಗವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನವೆಂಬರ್ 2020ರದು ಹರಿಯಾಣದ ಫತಾಹಾಬಾದ್ ಜಿಲ್ಲೆಯ ಭಾಟ್ಟು ಕಲಾನ್ ಗ್ರಾಮದ ದೇವಸ್ಥಾನದ ಅರ್ಚಕರೊಬ್ಬರು ಕ್ರಿಕೆಟ್ ಉಪಕರಣಗಳನ್ನು ದೇವಾಲಯದಲ್ಲಿ ಇರಿಸಿಕೊಳ್ಳಲು ನಿರಾಕರಿಸಿದ್ದರಿಂದ, ಕ್ರಿಕೆಟ್ ಆಡುವ ಹುಡುಗರ ಗುಂಪು ಅರ್ಚಕರ ಮೇಲೆ ಬ್ಯಾಟ್ನಿಂದ ಹಲ್ಲೆ ಮಾಡಿದೆ. ಆದರೆ ಇದನ್ನು ಮುಸ್ಲಿಂ ಯುವಕರು ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಹಳೆಯ ಘಟನೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಇಂದಿರಾ ಗಾಂಧಿ ಧರಿಸಿರುವುದು ಬುರ್ಖಾನು ಅಲ್ಲ ಹಿಜಾಬು ಅಲ್ಲ!

