ಗ್ರಹಣ ದೋಷ ನಿವಾರಣೆಗಾಗಿ ಸಿಎಂ ಯಡಿಯೂರಪ್ಪ ಕೇರಳದಲ್ಲಿ ಟೆಂಪಲ್ ರನ್…

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇರಳದಲ್ಲಿ ಟೆಂಪಲ್ ರನ್‌ಗೆ ಮುಂದಾಗಿದ್ದಾರೆ. ಗ್ರಹಣ ದೋಷ ನಿವಾರಣೆಯ ಹೆಸರಿನಲ್ಲಿ ನೆರೆಯ ಕೇರಳದಲ್ಲಿ ಗುಡಿ-ಗೋಪುಗಳ ಸುತ್ತಾಟಕ್ಕೆ ಬಿಎಸ್ವೈ ಅವರು ಹೊರಟಿದ್ದಾರೆ.

ಇದೇ ೨೬ರಂದು ಗೋಚರಿಸಲಿರುವ ಸೂರ್‍ಯ ಗ್ರಹಣದ ಹಿನ್ನೆಲೆಯಲ್ಲಿ ದೋಷ ಪರಿಹಾರಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕುಟುಂಬಸ್ಥರ ಜೊತೆ ದೇವರ ಮೊರೆ ಹೋಗಲಿದ್ದಾರೆ. ಡಿಸೆಂಬರ್ ೨೬ರ ಅಮವಾಸ್ಯೆಗೂ ಮುನ್ನ ಹೋಮ-ಹವನ ನಡೆಸುವಂತೆ ಯಡಿಯೂರಪ್ಪ ಅವರಿಗೆ ರ‍್ಚಕರು ಸಲಹೆ ನೀಡಿದ್ದರು.

ಕೇರಳ ಪ್ರವಾಸದ ವೇಳೆ ಯಡಿಯೂರಪ್ಪ ಅವರು ಸುಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಹೋಮ-ಹವನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆ ಕುರಿತು ಮಾತುಕತೆಗೆ ಬಿಎಸ್ವೈ ದಿಲ್ಲಿಗೆ ತೆರಳಬೇಕಿತ್ತು. ಆದರೆ ದಿಲ್ಲಿ ನಾಯಕರು ಪೌರ್‍ತವ ಕಾಯಿದೆ ವಿರುದ್ಧದ ಜನಾಕ್ರೋಶ ಶಮನ ಮಾಡುವ ನಿಟ್ಟಿನಲ್ಲಿ ತಲೆಬಿಸಿ ಮಾಡಿಕೊಂಡಿರುವ ಕಾರಣ ದಿಲ್ಲಿ ಪ್ರವಾಸ ಮುಂದೂಡುವ ಸಾಧ್ಯತೆಗಳೇ ಹೆಚ್ಚಿವೆ.

ಇದೆಲ್ಲದರ ನಡುವೆ ಮಂತ್ರಿಗಿರಿಗಾಗಿ ಉಪಸಮರದಲ್ಲಿ ಗೆದ್ದ ರ‍್ಹ ಶಾಸಕರ ಕಾಯುವಿಕೆ ಇನ್ನಷ್ಟು ಕಾಲ ಮುಂದುವರಿಯಲಿದೆ. ಸಂಕ್ರಾಂತಿ ನಂತರವಷ್ಟೇ ಮಂತ್ರಿಭಾಗ್ಯ ಎಂಬುದು ಅವರ ಅರಿವಿಗೂ ಬಂದಿದ್ದು ನರ‍್ವಾಹವಿಲ್ಲದೇ ಸುಮ್ಮನಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights