‘ಟೀಂ ಕ್ಯಾಪ್ಟನ್ ತನಗೆ ಬೇಕಾದ ಟೀಂ ಆಯ್ಕೆ ಮಾಡಿಕೊಳ್ಳುತ್ತಾರೆ’ ಎಸ್.ಎ.ರಾಮದಾಸ್

ಟೀಂ ಕ್ಯಾಪ್ಟನ್ ತನಗೆ ಬೇಕಾದ ಟೀಂ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಸ್ಥಾನ ಸಿಗದಿದ್ದಕ್ಕೆ ಬಿಜೆಪಿ ನಾಯಕರಿಗೆ ಶಾಸಕ ಎಸ್.ಎ.ರಾಮದಾಸ್ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ತಮಗೆ ಬೇಕಾದವರೆಗೆ ಮಂತ್ರಿ ಕೊಟ್ಟಿದ್ದಾರೆ ಎಂದ ಶಾಸಕ ರಾಮದಾಸ್ ಅಸಮಧಾನವನ್ನ ಹೊರಹಾಕಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸರ್ಕಾರವಿದ್ದಾಗ ಮೈಸೂರಿನಲ್ಲಿ ಮೂರು ನಾಲ್ಕು ಜನ ಮಂತ್ರಿಗಳಿರುತ್ತಿದ್ದರು. ಬಿಜೆಪಿ ಸರ್ಕಾರ ಬಂದಾಗ ಆ ಪರಿಸ್ಥಿತಿ ಇರೋಲ್ಲ‌. 2008ರಲ್ಲು ಇದೆ ಪರಿಸ್ಥಿತಿ ಇತ್ತು ಈಗಲೂ ಇದೆ.

ದಸರಾದಲ್ಲಿ ಪ್ರತಿ ಬಾರಿ ನಮ್ಮನ್ನ ನಾವು ತೋಡಗಿಸಿಕೊಳ್ಳುತ್ತೇವೆ. ಆದ್ರೆ ನಮ್ಮ ಸರ್ಕಾರ ಬಂದಾಗ ಹೊರಗಿನವರು ಉಸ್ತುವಾರಿ ಆಗಿರುತ್ತಾರೆ. ಇದನ್ನ ಪರಿಸ್ಥಿತಿ ಅನ್ನು ಬೇಕು ಏನೋ ಗೊತ್ತಿಲ್ಲ‌. ಅನುಭವವ ಇರುವವರೆಗೆ ದಸರಾ ಆಚರಣೆ ಉಸ್ತುವಾರಿ ಇದ್ದರೆ ಇನ್ನಷ್ಟು ಯಶಸ್ಸು ಕಾಣಬಹುದು.

ಜನರು ಸಹ ಹಳೆ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ ಅಂತ ಹೇಳುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಸಹ ಬೇಸರಗೊಂಡಿದ್ದಾರೆ. ಎಲ್ಲರ ಜೊತೆ ಮಾತನಾಡಿದ್ದೇನೆ. ಎಲ್ಲರ ಮನವೋಲಿಸುವ ಕೆಲಸ ಮಾಡುತ್ತಿದ್ದೇನೆ. ಮಂತ್ರಿ ಸ್ಥಾನಕ್ಕೆ ನಾನು ಆಕಾಂಕ್ಷಿ ಅಲ್ಲ. ಕೆಲಸ ಮಾಡುವ ಸಾಮಾರ್ಥ್ಯ ಇದೆ ಅಂತ ಕೊಟ್ಟರೆ ನಿಭಾಯಿಸುವೇ. ಸರ್ಕಾರದಲ್ಲಿ ಮಂತ್ರಿ ಆಗದಿದ್ದರೂ ನನ್ನ ಕ್ಷೇತ್ರದ ಜನರ ಸೇವೆ ಮಾತ್ರ ನಿಲ್ಲಿಸೋಲ್ಲ ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *