ಹಿರಿಯ ಕಲಾವಿದ ಶ್ರೀನಿವಾಸ ಮೂರ್ತಿ ಅವರನ್ನು ಡಾ. ರಾಜ್‌ಕುಮಾರ್‍ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆ ನಿರ್ದೇಶಕ ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಹಾಗೂ ಬಸವರಾಜ್ ಬಿಎನ್ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ನೀಡಿಲಾಗಿದೆ.

2018ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಅಮ್ಮನ ಮನೆ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಘವೇಂದ್ರ ರಾಜ್‌ಕುಮಾರ್‍ ಹಾಗೂ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿನ ಉತ್ತಮ ನಟನೆಗಾಗಿ ಮೇಘನಾ ರಾಜ್ ಅವರುಗಳಿಗೆ ಅತ್ಯುತ್ತಮ ನಟನಾ ಪ್ರಶಸ್ತಿಗಳನ್ನು ಕೊಡಮಾಡಲಾಗಿದೆ.

ದಯಾಳ್ ಪದ್ಮನಾಭ ನಿರ್ದೇಶನದ ಆ ಕರಾಳ ರಾತ್ರಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದ್ದರೇ, ಸೂಪರ್‍ ಹಿಟ್ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಟುವಾರಳ್ಳಿ ಅತ್ಯುತ್ತಮ ಕಿರುಚಿತ್ರ ಗರಿಮೆಗೆ ಪಾತ್ರವಾಗಿದೆ.

ಬಾಲಾಜಿ ಮನೋಹರ್‍ (ಚೂರಿಕಟ್ಟೆ) ಮತ್ತು ವೀಣಾ ಸುಂದರ್ (ಆ ಕರಾಳ ರಾತ್ರಿ) ಅತ್ಯುತ್ತಮ ಪೋಷಕ ಪಾತ್ರಗಳಿಗಾಗಿ ಪ್ರಶಸ್ತಿ ಪಡೆದರೇ ಕೆಜಿಎಫ್ ಚಿತ್ರಕ್ಕಾಗಿ ರವಿ ಬಸ್ರೂರು ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸಂದಾಯವಾಗಿದೆ. ಚಲನಚಿತ್ರ ಸಾಹಿತ್ಯ ಪ್ರಶಸ್ತಿಯನ್ನು ಎನ್.ಎಸ್. ಶಂಕರ್ ಹಾಗೂ ಶರಣು ಹುಲ್ಲೂರ್ ಅವರು ಪಡೆದುಕೊಂಡಿದ್ದಾರೆ