‘ಡಿಕೆಶಿ ಒಬ್ಬರೇನಾ ದೇಶದಲ್ಲಿ 7 ಕೋಟಿ ಹಣ ಇಟ್ಟಿಕೊಂಡಿದ್ದು?’ ಹೆಚ್.ಡಿ ರೇವಣ್ಣ
ಸಿದ್ದರಾಮಯ್ಯ ಬಗ್ಗೆ ನಾನು ಮಾತನಾಡೊಲ್ಲಾ, ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ಅನುಭವಿ ರಾಜಕಾರಣಿ. ಹಿಂದಿನ ಸರ್ಕಾರದ ಕಥೆ ಅದು ಪೋಸ್ಟ್ ಮಾರ್ಟಮ್ ಆಗಿದೆ ಈ ಬಗ್ಗೆ ನಾನು ಮಾತನಾಡೊಲ್ಲಾ.
ಮಾಜಿ ಸಚಿವ ಡಿಕೆಶಿಯನ್ನ ಇಡಿ ವಿಚಾರಣೆ ವಿಚಾರ, ಡಿಕೆಶಿ ಒಬ್ಬರೇನಾ ಇರೋದು ದೇಶದಲ್ಲಿ 7 ಕೋಟಿ ಹಣ ಇಟ್ಟಿದ್ದಾರಾ? ತನಿಖೆ ಮಾಡ್ತಿದ್ದಾರೆ ಮಾಡಲೀ ನೋಡೋಣ ಎಂದು ಡಿಕೆ ಶಿವಕುಮಾರ್ ಪರ ಬ್ಯಾಂಟಿಂಗ್ ಮಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಾರೀ ಕುತೂಹಲ ಕೆರಳಿಸಿದ್ದಾರೆ.
ಐಟಿ ಮತ್ತು ಇಡಿ ಅಂದರೇನು ನನಗೆ ಗೊತ್ತಿಲ್ಲಾ. ನಾನ್ಯಾಕೆ ದೇಶದ ಬಗ್ಗೆ ಮಾತನಾಡಲೀ ಎಂದು ವ್ಯಂಗ್ಯವಾಗಿದ್ದಾರೆ. ಸಿಎಂಗೆ ನಿದ್ರೆ ಮಾಡೋಕೆ ಬಿಡುತ್ತಿಲ್ಲಾ ಒಂದುಕಡೆ ಸಚಿವ ಸಂಪುಟ ಮತ್ತೊಂದು ಕಡೆ ಅನರ್ಹ ಶಾಸಕರ ಕಥೆ. ನಾನು ಅಮಿತ್ ಷಾ ಬಗ್ಗೆಯಾಗಲೀ ಪ್ರಧಾನಿ ಬಗ್ಗೆಯಾಗಲೀ ಮಾತನಾಡೊಲ್ಲಾ. ನಾನು ಸಣ್ಣವನು ಹೊಳೆನರಸೀಪುರದ ಶಾಸಕ ಅಷ್ಟೇ.
12 ಜಿಲ್ಲೆಯ ಜನ್ರು ಬಾರೀ ಸಮಸ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕದ ಜನ್ರು ಸಂಕಷ್ಟದಲ್ಲಿದ್ದಾರೆ. ಒಂದು ಹಾಲಿನ ಡೈರಿ ಮಾಡೋಕು 300 ಕೋಟಿ ಬೇಕು. ಸಿಬ್ಬಂದಿಗಳಿಗೆ ಸಂಬಳ ಹೇಗೆ ಕೊಡ್ತಾರೋ ಏನೋ?
ಕೆಎಂಎಫ್ ಅಧ್ಯಕ್ಣ ಸ್ಥಾನದ್ದು ನಾನೇ ವಾಪಸ್ ತೆಗೆದುಕೊಂಡಿದ್ದೇನೆ ಎಂದು ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. ಮೊದಲ ಟಾರ್ಗೆಟ್ ದೇವೇಗೌಡರು. ದೇವೇಗೌಡರನ್ನ ಮುಗಿಸಬೇಕು ಅಂತಾ ಸಿಎಂ ಹೊರಟಿದ್ದಾರೆ. ದೇವೇಗೌಡರನ್ನ ಮುಗಿಸಿದ್ರೆ ರಾಜಕೀಯ ಮಾಡೋಕೆ ಸರಿ ಅಂತಾ ಸಿಎಂ ಹೊರಟಿದ್ದಾರೆ. ಸಿಎಂ ಏನು ಮಾಡ್ತಾರೆ ನೋಡೋಣ ಎಂದು ಸಿಎಂ ವಿರುದ್ದ ವಾಗ್ದಾಳಿ ಮಾಡಿದ್ದಾರೆ.