ಡಿಕೆ ಶಿವಕುಮಾರ್ ನೋವಿನಲ್ಲಿ ಇದಾರೆ, ದೇವರು ಅವರ ನೋವನ್ನು ಭರಿಸುವ ಶಕ್ತಿ‌ನೀಡಲಿ – ಕೆಎಸ್ ಈಶ್ವರಪ್ಪ

ದಾವಣಗೆರೆಯಲ್ಲಿ ಡಿಕೆಶಿ ಪ್ರಕರಣ ದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ, ಡಿಕೆಶಿ ವಿಚಾರವನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ಡಿಕೆ ಶಿವಕುಮಾರ್ ನೋವಿನಲ್ಲಿ ಇದಾರೆ, ದೇವರು ಅವರ ನೋವನ್ನು ಭರಿಸುವ ಶಕ್ತಿ‌ನೀಡಲಿ. ಕುಟುಂಬದವರು ಕಣ್ಣೀರು ಹಾಕುತ್ತಿರುವುದು ಮಾಧ್ಯಮಗಳಲ್ಲಿ ನೋಡಿದ್ದೇವೆ ಎಂದು ನಯವಾಗಿ ಕುಟುಕಿದ್ದಾರೆ.

ಹರಿಯಾಣದಲ್ಲೂ ನಾವೇ ಮುಖ್ಯಮಂತ್ರಿಯಾಗುತ್ತೇವೆ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಪಾಲಿಕೆ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಎಸ್ ಈಶ್ವರಪ್ಪ. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದಿಗೆ ಏರಲಿದೆ ಎಂದಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮುಂದುವರಿಸಿದ ಕೆ ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಸಭಾಧ್ಯಕ್ಷರ ಸ್ಥಾನಕ್ಕೆ ಅಗೌರವ ತೋರುತ್ತಿದ್ದಾರೆ. ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು. ರಮೇಶ್ ಕುಮಾರ್ ಸಭಾಧ್ಯಕ್ಷರಾಗಿದ್ದಾಗ ಒಬ್ಬರನ್ನೊಬ್ಬರು ಹೊಗಳುತ್ತಿದ್ರು. ರಮೇಶ್ ಕುಮಾರ್‌ರನ್ನು ಅಂಬೇಡ್ಕರ್ ಎನ್ನುತ್ತಿದ್ದರು.  ಸಿದ್ದರಾಮಯ್ಯ ರನ್ನು ದೇವರಾಜ್ ಅರಸ್ ಎಂದು ಪರಸ್ಪರ ಹೊಗಳುತ್ತಿದ್ದರು. ಆದ್ರೆ ಈಗ ಸಭಾಧ್ಯಕ್ಷರ ವಿರುದ್ದ ಏಕ ವಚನ ದಲ್ಲಿ ಕರೆಯುತ್ತಿದ್ದಾರೆ.

ಕೂಡಲೇ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights