‘ಡಿ.ಕೆ.ಶಿವಕುಮಾರ್ ಅವರಿಂದ ಇಡಿ ಅಧಿಕಾರಿಗಳು ಕಣ್ಣೀರು ಹಾಕಿಸುತ್ತಿದ್ದಾರೆ’ ಖಂಡ್ರೆ ಆಕ್ರೋಶ

ಗುಜರಾತ್‍ನ ಶಾಸಕರುಗಳನ್ನು ಕುದುರೆ ವ್ಯಾಪರ ಮಾಡಲು ಬಿಡದಿದಕ್ಕೆ ಇದೀಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಇಡಿ ಅಧಿಕಾರಿಗಳು ಕಣ್ಣೀರು ಹಾಕಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇಡು, ದ್ವೇಷ ರಾಜಕಾರಣದಿಂದ ಡಿ.ಕೆ.ಶಿವಕುಮಾರ್ ಅವರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಯಾವ ರೀತಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆ ಚಿತ್ರಣವನ್ನು ನೋಡಿದರೆ ಶಾಕ್ ಆಗುತ್ತಿದೆ. ಹಬ್ಬದ ದಿನ ಸಂಭ್ರಮದಿಂದ ಇರಬೇಕು. ಹಬ್ಬ, ಸಂಪ್ರದಾಯ, ಪೂರ್ವಿಕರ ಕಾರ್ಯಕ್ಕೆ ಅವಕಾಶ ನೀಡದೆ ಕಿರುಕುಳ ನೀಡುವುದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಇದು ಅತ್ಯಂತ ಖಂಡನೀಯ, ಬಿಜೆಪಿ ಸರ್ಕಾರ ಮಾನವೀಯತೆಯನ್ನು ಮರೆತು ಸೇಡಿನ ರಾಜಕೀಯ ಮಾಡುತ್ತಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಜೊತೆ ಕಾಂಗ್ರೆಸ್ ಪಕ್ಷ ಇದೆ, ಸತ್ಯಕ್ಕೆ ಜಯ ಸಿಗುತ್ತದೆ ಎಂದು ಈಶ್ವರ್ ಖಂಡ್ರೆ ಭರವಸೆ ವ್ಯಕ್ತಪಡಿಸಿದರು.

Spread the love

Leave a Reply

Your email address will not be published. Required fields are marked *