ಡಿ ಕೆ ಶಿವಕುಮಾರ್ ಪರ ಪ್ರತಿಭಟನೆಗೆ ಅವಕಾಶ ಮಾಡಿಕೊಡದಿರಲು ದೂರು…
ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದನ್ನು ಖಂಡಿಸಿ ರಾಜ್ಯದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಹೌದು… ಡಿ ಕೆ ಶಿವಕುಮಾರ್ ಪರ ಪ್ರತಿಭಟನೆಗೆ ಅವಕಾಶ ಮಾಡಿಕೊಡದಿರಲು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಂಜುನಾಥ್ ಎಂಬುವವರಿಂದ ದೂರು ನೀಡಲಾಗಿದೆ.
ಒಕ್ಕಲಿಗ ಸಂಘದ ಹೆಸರಿನಲ್ಲಿ ಒಬ್ಬ ಆರೋಪಿಯ(ಡಿ ಕೆ ಶಿವಕುಮಾರ್ ) ಪರ ಪ್ರತಿಭಟನೆಗೆ ಅವಕಾಶ ಮಾಡಿಕೊಡದಿರಲು ದೂರಿನಲ್ಲಿ ಮನವಿ ಮಾಡಲಾಗಿದೆ.
ಬೆಂಗಳೂರಲ್ಲಿ ವಿವಿಧ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ಮಾಡಲು ಕರೆ ನೀಡಿರುವುದು ಖಂಡನೀಯ , ಹಾಗು ಸಂವಿಧಾನ ವಿರೋಧಿ ನಡೆಯಾಗಿದೆ. ಡಿ ಕೆ ಶಿವಕುಮಾರ್ ಬಂಧನವಾಗಿರುವುದು ಆರ್ಥಿಕ ಅಪರಾಧಗಳಿಗಾಗಿ , ತೆರಿಗೆ ವಂಚನೆ , ಹವಾಲಾ ದಂತಹ ಗುರುತರ ಆರೋಪಗಳಿಂದಾಗಿ. ಅವರ ಪರ ನ್ಯಾಯಾಲಯದಲ್ಲಿ ಹೋರಾಟಮಾಡುವ ಬದಲು , ಇದಕ್ಕೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಜಾತಿ ಬಣ್ಣವನ್ನು ಕಟ್ಟಿ ಒಕ್ಕಲಿಗ ಜಾತಿಯನ್ನು ಗುರಾಣಿಯಂತೆ ಬಳಸಿಕೊಂಡು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದೂ ದೂರಿದ್ದಾರೆ.