ತಾನು ಹಾಕಿದ ಬಲೆಗೆ ತಾನೇ ಬಿದ್ದು ಸಾವನ್ನಪ್ಪಿದ ಮೀನುಗಾರ…!

ತಾನು ಹಾಕಿದ ಬಲೆಗೆ ತಾನೇ ಬಿದ್ದು ಮೀನುಗಾರನೊಬ್ಬ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ ಗ್ರಾಮದ ಕೃಷ್ಣಾ ನದಿ ಹಿನ್ನೀರಿನಲ್ಲಿ ನಡೆದಿದೆ.

ನಿಂಗಬಸಪ್ಪ ಅವ್ವಪ್ಪ ಚಲವಾದಿ(32) ಸಾವನ್ನಪ್ಪಿದ ಮೀನುಗಾರ.  ಮೀನು ಹಿಡಿಯಲು ಹೋದ ಮೀನುಗಾರ ತಾನು ಹಾಕಿದ ಬಲೆಗೆ ಸಿಲುಕಿ  ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಿಂಗಬಸಪ್ಪನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights