ದಲಿತರ ಮೇಲೆ ಐಟಿ ದಾಳಿಯಾಗ್ತಿದೆ ಎಂದು ಆರೋಪಿಸಿದ್ದ ಕೆಎಚ್ ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್
ಸಂಸದ ಕೆಎಚ್ ಮುನಿಯಪ್ಪಗೆ ಇದೆಯಂತೆ ಐಟಿ ದಾಳಿಯ ಭೀತಿ ಶುರುವಾಗಿದೆ.
೪ ಎಕರೆ ಜಮೀನಿಗಾಗಿ ಅರ್ಜಿ ಸಲ್ಲಿಸಿ ೨ ಸಾವಿರ ಎಕರೆ ಆಸ್ತಿ ಮಾಡಿದ ಮುನಿಯಪ್ಪಗೆ ಐಟಿ ಎಂದ್ರೆ ಭಯವಂತೆ ಹೀಗೆಂದು ಕೋಲಾರದಲ್ಲಿ ಅವರೇ ಹೇಳಿಕೊಂಡಿದ್ದಾರೆ. ದಲಿತರ ಮೇಲೆ ಐಟಿ ದಾಳಿಯಾಗ್ತಿದೆ ಎಂದು ಆರೋಪಿಸಿದ್ದ ಕೆಎಚ್ ಮುನಿಯಪ್ಪಗೆ ಮುನಿಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಕೆಎಚ್ ಮುನಿಯಪ್ಪ ಒಬ್ಬರೇ ದಲಿತರಲ್ಲ, ದೇಶದಲ್ಲಿ ಸಾವಿರಾರು ದಲಿತ ಪರ ನಾಯಕರಿದ್ದಾರೆ. ೧೯೭೫ ರಲ್ಲಿ ೧ ಎಕರೆ ಜಮೀನಿಲ್ಲದ ಕೆಎಚ್ ಮುನಿಯಪ್ಪ ಇಂದು ಸಾವಿರಾರು ಕೋಟಿ ಆಸ್ತಿ ಮಾಲೀಕ ಇದು ಹೇಗೆ ಆದದ್ದು ಎಂದು ಮುನಿಸ್ವಾಮಿ ಪ್ರಶ್ನೆ ಹಾಕಿದ್ದಾರೆ.
ದುಡಿದು ಸಂಪಾದಿಸಿದ್ದರೆ ಯಾರು ಯಾರಿಗೂ ಹೆದರುವ ಸಂದರ್ಭ ಇರಲ್ಲ. ಮಾಜಿ DCM ಪರಮೇಶ್ವರ್ ಮೇಲಿನ ಐಟಿ ದಾಳಿಗೆ ದಲಿತರ ಮೇಲೆ ದಾಳಿ ಎಂದು ಟೀಕಿಸಿದ್ದ ಮಾಜಿ ಸಂಸದ ಕೆಎಚ್ ಮುನಿಯಪ್ಪಗೆ ಎಸ್. ಮುನಿಸ್ವಾಮಿ ಟಾಂಗ್ ಕೊಟ್ಟಿದ್ದಾರೆ.