‘ದೂರು ನೀಡಿದ ಬಳಿಕ ನನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ’ ತ್ರಿವಳಿ ತಲಾಕ್ ಗೆ ಒಳಗಾದ ಆಯಿಷಾ
ನನಗೆ ನನ್ನ ಗಂಡ ದುಬೈನಲ್ಲಿ ಕೂತು ಮೋಸ ಮಾಡಿದ್ದಾರೆ. ಪತಿ ಬಗ್ಗೆ ದೂರು ನೀಡಿ ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಹಿನ್ನಲೆ, ನನ್ನ ತಮ್ಮ ಮತ್ತು ತಾಯಿ ಸಹ ನನಗೆ ಬೈದಿದ್ದಾರೆ.ಅಕ್ಕಪಕ್ಕದ ಮನೆಯವರು, ಕುಟುಂಬಸ್ಥರು ಯಾರು ಸಹ ಸ್ಪಂದಿಸುತ್ತಿಲ್ಲ ಎಂದು ತ್ರಿವಳಿ ತಲಾಕ್ ಗೆ ಒಳಗಾಗಿರುವ ಮಹಿಳೆ ಆಯಿಷಾ ಮಾಧ್ಯಮಗೋಷ್ಠಿ ನಡೆಸಿ ಅಳಲು ತೊಡಿಕೊಂಡಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಮದುವೆ ಆಗಿತ್ತು, ನನ್ನದು ಯಾವುದೇ ತಪ್ಪಿಲ್ಲದಿದ್ದರೂ, ಪತಿ ತಲಾಕ್ ಹೇಳಿದ್ದಾರೆ. ಮಹಿಳಾ ಸಂಘಟನೆಯವರು ಸೇರಿದಂತೆ ಯಾರು ಸಹ ನನ್ನ ಸಹಾಯಕ್ಕೆ ಬರುತ್ತಿಲ್ಲ. ತಲಾಕ್ ಕೊಟ್ಟಮೇಲೆ ಗಂಡನ ಮನೆಯಲ್ಲಿ ಇದ್ದೀಯಾ ಎಂದು ಕುಟುಂಬಸ್ಥರು ಅವಮಾನ ಮಾಡುತ್ತಿದ್ದಾರೆ.
ಈ ಘಟನೆ ಆದ ನಂತರ ನನಗೆ ಯಾರು ಸಹಾಯ ಮಾಡುತ್ತಿಲ್ಲ. ನನಗೆ ನ್ಯಾಯ ಬೇಕು ಎಂದ ಆಯಿಷಾ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

