ದೆಹಲಿಯಂತೆ ಮಂಗಳೂರಿನಲ್ಲೂ ಗಲಾಟೆ ಆಗಲು ಅವಕಾಶ ಕೊಡಬೇಡಿ – ಸಿದ್ದರಾಮಯ್ಯ ಕಿಡಿ

ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವರ ನಿರ್ದೇಶನ ದಂತೆ ಕೆಲಸ ಮಾಡುತ್ತಾರೆ. ದೆಹಲಿಯ ರಕ್ಷಣೆ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಬಂದಿದ್ದರೂ ಸಹ ಅಮಿತ್ ಶಾ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಗುವುದಿಲ್ಲ ಎಂದು ಸಿದ್ದರಾಂಯ್ಯ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರತೆಯ ಉಸ್ತುವಾರಿ ನೋಡಿಕೊಳ್ಳಬೇಕು. ದೆಹಲಿಯಂತೆ ಮಂಗಳೂರಿನಲ್ಲೂ ಗಲಾಟೆ ಆಗಲು ಅವಕಾಶ ಕೊಡಬಾರದು. ಈಗಾಗಲೇ ಮಂಗಳೂರಿನಲ್ಲಿ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾತ್ಮಗಾಂಧೀಜಿ ಅವರ ಸಾಬರಮತಿ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಬಿಜೆಪಿಯವರಿಗೆ ತಾವು ಮಾಡಿದ ಯಾವ ಸಾಧನೆಗಳನ್ನು ತೋರಿಸಲು ಅವಕಾಶವಿಲ್ಲ. ಅವರು ಯಾವ ಸಾಧನೆಗಳನ್ನು ಮಾಡಿಲ್ಲ. ಐತಿಹಾಸಿಕವಾಗಿಯಾಗಲಿ, ಸ್ಮಾರಕವಾಗಿಯಾಗಲಿ ಬಿಜೆಪಿಯವರಿಂದ ಯಾವ ನಿರ್ಮಾಣಗಳು ನಡೆದಿಲ್ಲ ಎಂದು ಲೇವಡಿ ಮಾಡಿದರು.

ಟ್ರಂಪ್ ಭಾರತಕ್ಕೆ ಬಂದ ನೆಪದಲ್ಲಿ ಒಪ್ಪಂದಗಳಿಗೆ ಸಹಿ ಹಾಕುವಾಗ ಮೋದಿ ಅವರು ಎಚ್ಚರಿಕೆಯಿಂದ ಇರುವುದು ಅಗತ್ಯ. ರೈತರ ಆರ್ಥಿಕತೆಗೆ ಧಕ್ಕೆಯಾಗುವಂತಹ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಸಲಹೆ ನೀಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights