ದೇಶ ಕಾಯುವ ಯೋಧನಿಂದಲೇ ದೇಶದ್ರೋಹಿಗಳ ಬಣ್ಣ ಬಯಲು…

ದೇಶ ಕಾಯುವ ಯೋಧನಿಂದಲೇ ದೇಶದ್ರೋಹಿಗಳ ಬಣ್ಣ ಫೇಸ್ಬುಕ್ ಗ್ರುಪ್ ನಲ್ಲಿ ಬಯಲಾಗಿದೆ.

ಜಮ್ಮುಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ತಿಮ್ಮಣ್ಣ ಬಂಡಿವಡ್ಡರ ದೇಶದ್ರೋಹಿಗಳ ಬಣ್ಣ ಬಯಲು ಮಾಡಿದ ಯೋಧ.  ಬಾರ್ ನಲ್ಲಿ ಕುಳಿತು ಪಾಪಿ ಪಾಕಿಸ್ತಾನಕ್ಕೆ ಜಯಘೋಷ ಹಾಕಿದವರ ವಿರುದ್ಧ ಯೋಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಅಷ್ಟೇ ಅಲ್ಲದೇ ಭೋವಿ ಸಮಾಜ ವಿಜಯಪುರ ಫೇಸ್ಬುಕ್ ಗ್ರುಪ್ ನಲ್ಲಿ ದೇಶದ್ರೋಹಿಗಳ ಬಣ್ಣ ಬಯಲು ಮಾಡಿದ್ದಾರೆ.

ಬಾರ್ ಒಂದರಲ್ಲಿ ಕುಳಿತಿದ್ದ ನಾಲ್ವರು ಕುಡುಕರು ಕುಡಿದು ಮಜಾ ಮಾಡುತ್ತ ಪಾಕಿಸ್ತಾನಕ್ಕೆ ಜಯಕಾರ ಹಾಕಿದ್ದ ಕಿಡಿಗೇಡಿಗಳು ಮತ್ತೆ ಮತ್ತೆ ಅವಿವೇಕಿತನ ಪ್ರದರ್ಶಿಸಿದ್ದಾರೆ.

ಬಾರ್ ನಲ್ಲಿ ಕುಳಿತು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಿದ್ದಂತೆ ಯೋಧ ತಿಮ್ಮಣ್ಣ ಆಕ್ಷೇಪ ಮಾಡಿದ್ದಾರೆ.ನಾಲ್ವರು ಪುಂಡರ ಬಳಿ ಹೋಗಿ ದೇಶದ್ರೋಹ ಮಾಡ್ತಿದ್ದೀರಾ ಎಂದು ಪ್ರಶ್ನಿಸಿ ತಿಳುವಳಿಕೆ ಹೇಳಿದ್ದಾರೆ. ಪ್ರಾಣ ಒತ್ತೆಯಿಟ್ಟು ನಾವು ದೇಶ ಕಾಯ್ತೆವೆ. ನೀವಿಲ್ಲಿ ಅನ್ಯ ದೇಶಕ್ಕೆ ಜಯಕಾರ ಹಾಕ್ತೀರಾ ಎಂದು ಬುದ್ದಿ ಹೇಳಿದ್ದಾರೆ. ನೀವು ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದು ಕಿವಿಗೆ ಬಿದ್ದ ತಕ್ಷಣ ನನ್ನ ಹೊಟ್ಟೆ ಉರಿಯುತ್ತೆ ಎಂದಾಗ ಯೋಧನ ಆಕ್ಷೇಪಣೆ ಬಳಿಕ ತಪ್ಪಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.  ನಂತರ ತಿಮ್ಮಣ್ಣ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು ಹೀಗೆ…

ನೋಡಿ ಸ್ನೇಹಿತರೆ,

ಈ ವಿಡಿಯೋದಲ್ಲಿ ನಾಲ್ಕು ಜನ ಇದ್ದರೂ ನಾಲ್ಕು ಜನರಲ್ಲಿ ಒಬ್ಬ ಪಾಕಿಸ್ತಾನ ಜಿಂದಾಬಾದ ಎಂದು ಘೋಷಣೆ ಕೂಗಿದ. ಇದನ್ನು ಷೇರ್ ಮಾಡಿ ಇವರು ಯಾರೇ ಆಗಲಿ ಇವರಿಗೆ ಶಿಕ್ಷೆ ಹಾಗುವಂತೆ ಮಾಡಿ ಎಷ್ಟು ಷೇರ್ ಮಾಡಿದರೆ ಅಷ್ಟು ಬೇಗ ಶಿಕ್ಷೆ ಆಗುತ್ತೆ ಎಂದು ತಿಮ್ಮಣ್ಣ ವಿಡಿಯೋ ಸಮೇತ ಫೇಸಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ವಿಡಿಯೋ ಪೋಸ್ಟ್ ಮಾಡಿದ ಯೋಧ ದೇಶದ್ರೋಹದ ಅಡಿಯಲ್ಲಿ ಬಂಧಿಸುವಂತೆ ಭೋವಿ ಸಮಾಜ ವಿಜಯಪುರ ಫೇಸ್ಬುಕ್ ಗ್ರುಪ್ ನಲ್ಲಿ ಶೇರ್ ಮಾಡಿ ಆಗ್ರಹಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights