ನಂಜುಡೇಶ್ವರ ದೇವಾಲಯದಲ್ಲಿ ಹುಂಡಿಯಿಂದ 96 ಲಕ್ಷಕ್ಕೂ ಅಧಿಕ ಹಣ ಸಂಗ್ರಹ…!

ನಂಜನಗೂಡಿನ ನಂಜುಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದ್ದು  96 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.

ನಿನ್ನೆ ಸಲಹಾ ಸಮಿತಿಯ ಅಧ್ಯಕ್ಷರು ಸದಸ್ಯರ ಸಮ್ಮುಖದಲ್ಲಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಪ್ರತ್ಯಕ್ಷವಾದ 500 ಮತ್ತು 1000 ರೂಗಳ ಮುಖಬೆಲೆಯ ಹಳೆಯ ನೋಟುಗಳು ದೊರೆತಿವೆ.

ಸುಮಾರು ಒಂದುವರೆ ತಿಂಗಳ ಅವಧಿಯಲ್ಲಿ  96,17, 234 ರೂ. ಹಣ ಸಂಗ್ರಹವಾಗಿದೆ. 34 ಗ್ರಾಂ ಚಿನ್ನ 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 8 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿವೆ. 17,500 ರೂ ನಿಷೇಧಿತ ನೋಟುಗಳು ಪತ್ತೆಯಾಗಿವೆ.

ಕಳೆದು ತಿಂಗಳಿಗಿಂತ 10 ಲಕ್ಷ ಆದಾಯ ಹೆಚ್ಚಿಸಿಕೊಂಡ ನಂಜುಂಡದಲ್ಲಿ ಸೆಪ್ಟಂಬರ್ ನಲ್ಲಿ 85, 66, 409 ರೂ ಹಣ ಸಂಗ್ರಹವಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹುಂಡಿ ಎಣಿಕೆಯಲ್ಲಿ ಭಾಗಿಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights