ನಾಗಮಂಗಲದಲ್ಲಿ ಸ್ವಪಕ್ಷದ ಹಾಲಿ ಶಾಸಕನ ವಿರುದ್ದವೇ ಕಳಪೆ ಕಾಮಗಾರಿ ಆರೋಪ….!

ಕಳಪೆ ಕಾಮಗಾರಿ ವಿರುದ್ದ ಬೇರೆ ಪಕ್ಷದವರು,ಇಲ್ಲ ಯಾರಾದ್ರು ಆಗದವರು ಆರೋಪ ಮಾಡೋದು ಸಹಜ. ಆದ್ರೆ ಒಂದೇ ಪಕ್ಷದದಿಂದ ಅದು ಒಂದೇ ಕ್ಷೇತ್ರದಲ್ಲಿದ್ದುಕೊಂಡು,ಜೊತೆಯಲ್ಲೆ ರಾಜಕಾರಣ ಮಾಡ್ತಿರೋ ಜನಪ್ರತಿ ನಿಧಿಗಳಿಬ್ಬರು ಅದೇ ಕ್ಷೇತ್ರದ ಶಾಸಕನ ವಿರುದ್ದವೇ ಕಳಪೆ ಕಾಮಗಾರಿಯ ಬಗ್ಗೆ ಗಂಭೀರ ಅರೋಪ ಮಾಡಿದ್ದಾರೆ.‌ ಅಲ್ದೆ ಶಾಸಕರು ತಮ್ಮನ್ನು ಸರಿಯಾಗಿ ಗಮನಿಸಿಕೊಳ್ತಿವೆಲ್ಲಂದು ಶಾಸಕರ ವಿರುದ್ದ ಜೆಡಿಎಸ್ ನಾಯರಿಬ್ಬರು ಗರಂ‌ ಆಗಿದ್ದಾರೆ.ಆಗಿದ್ರೆ ಈ ಆರೋಪ ಮಾಡ್ತಿರೋ ಆ ಜೆಡಿಎಸ್ ಪಕ್ಷದ ನಾಯಕರ್ಯಾರು ಅಂತೀರಾ ? ಈ ಸ್ಟೋರಿ ಓದಿ.

ಹೌದು.. ಕಾಮಗಾರಿಯಲ್ಲಿ ಇತ್ತೀಚೆಗೆ ಕಳಪೆ ಕಾಮಗಾರಿ ಅನ್ನೋದು ಮಾಮೂಲಾಗಿ ಬಿಟ್ಟಿದೆ.ಕಾಮಗಾರಿ ಕಳಪೆ ಬಗ್ಗೆ ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನು ಇಲ್ಲವೇ ಅಬ್ರಿ್ಎ ಆಗದವರು ಆರೋಪ ಮಾಡೋದು ಮಾಮೂಲಿ. ಆದ್ರೆ ಸಕ್ಕರೆನಾಡು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಜೆಡಿಎಸ್ ಪಕ್ಷದ ಶಾಸಕನ ವಿರುದ್ದ ಸ್ವಪಕ್ಷದ ನಾಯರಾದ ಪರಿಷತ್ ಸದಸ್ಯ ಅಪ್ಪಾಜಿಗೌಡ, ಮತ್ತು ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಇಬ್ಬರು ಹಾಲಿ ಶಾಸಕ ಸುರೇಶ್ ಗೌಡರ ವಿರುದ್ದ ಕ್ಷೇತ್ರದಲ್ಲಿ ಶಾಸಕರು ಕಳಪೆ ಕಾಮಗಾರಿಗೆ ಕುಮ್ಮಕ್ಕು ನೀಡ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಕ್ಷೇತ್ರದಲ್ಲಿ ಮಾಡ್ತಿರೋ ಹಲವು ರಸ್ತೆ, ಕೆರೆ ಹೂಳು, ಚರಂಡಿ ನಿರ್ಮಾಣ ಸೇರಿದಂತೆ ಹಲವಾರು ಲಕ್ಷಾಂತರ ರೂ ಅನುದಾನದ ಕಾಮಗಾರಿ ಕಳಪೆಯಾಗಿವೆ ಎಂದು ಗಂಭೀರ ಆರೋಪ ಮಾಡ್ತಿದ್ದಾರೆ.

ಇನ್ನು ಸ್ವಪಕ್ಷದ ನಾಯಕರೇ ತಮ್ಮ ವಿರುದ್ದ‌ ಈ ರೀತಿಯ ಗಂಭೀರ ಆರೋಪಕ್ಕೆ ಶಾಸಕ ಸುರೇಶ್ ಗೌಡ ಗರಂ ಆಗಿದ್ದಾರೆ. ನಾನು ಆ ರೀತಿಯ ಯಾವುದೇ ಕಳಪೆ ಕಾಮಗಾರಿ ನಡೆಸ್ತಿಲ್ಲ. ಅನುಮಾನವಿದ್ದರೆ ದಾಖಲೆ ಸಮೇತ ಫ್ರೂವ್ ಮಾಡುವಂತೆ ಆರೋಪ ಮಾಡಿರುವ ನಾಯಕರಿಗೆ ಸವಾಲ್ ಹಾಕಿದ್ದು, ಈ ರೀತಿ ಆರೋಪ ಮಾಡೋದು ತರವಲ್ಲ ಎಂದಿದ್ದಾರೆ. ಇನ್ನು ನಾನು ಯಾರನ್ನು‌ ನಿರ್ಲಕ್ಷ್ಯ ಮಾಡ್ತಿಲ್ಲ. ಅವ್ರು ಈ ರೀತಿಯ ಆರೋಪ ಯಾಕೇ ಮಾಡ್ತಿದ್ದಾರೆಂದು ನನಗೆ ಗೊತ್ತಿಲ್ಲವೆಂದು ತಿಳಿಸಿದ್ದಾರೆ.

ಒಟ್ಟಾರೆ ಕೆ.ಆರ್.ಪೇಟೆ ಉಪ ಚುನಾವಣೆ ಹೊಸ್ತಿಲ್ಲಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರೇ ಇದೀಗ ಪರಸ್ಪರ ಕೆಸರೆಚಾಟ ಮಾಡ್ತಿದ್ದು, ಪಕ್ಷದ ಮೇಲೆ ಮತ್ತು ಪ್ರಚಾರದಲ್ಲಿ ಯಾವ ರೀತಿ ಪರಿಣಾಮ ಬೀರುತ್ತೋ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights