ನಾನು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ : ಸಿದ್ದರಾಮಯ್ಯ ಪರ ವಿಶ್ವನಾಥ್ ಬ್ಯಾಟಿಂಗ್
ಸಿದ್ದರಾಮಯ್ಯ ಪರ ಹುಣಸೂರಿನಲ್ಲಿ ಅನರ್ಹ ಶಾಸಕ ಎಚ್ ವಿಶ್ವನಾಥ್ ಪುಲ್ ಬ್ಯಾಟಿಂಗ್ ನಡೆಸಿದ್ದಾರೆ.
ಹೌದು.. ನಾನು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದ್ದೇನೆ. ಈ ಕುರುಬನನ್ನು ಗೆಲ್ಲಿಸಿದ್ದು ನಾವು ಎಂದು ಹಂಗಿಸುತ್ತಿದ್ದರು. ಹುಣಸೂರಿನಲ್ಲಿ ವಿಶ್ವನಾಥ್ ಭಾವುಕ ನುಡಿಗಳನ್ನ ಆಡಿದ್ದಾರೆ.
ನಿಮ್ಮ ಜಾತಿಯವರು ಮತ ಹಾಕಿ ಗೆಲ್ಲಿಸಿಲ್ಲ ಎಂದು ಹೀಯಾಳಿಕೆ ಮಾಡಿದ್ರು. ಅದಕ್ಕಾಗಿ ನೋವಾಗಿ ಪಕ್ಷ ಬಿಟ್ಟೆ. ಸಿಎಂ ನೋಡಲು ಸ್ಟಾರ್ ಹೋಟೆಲ್ ಬಳಿ ಹೋಗಬೇಕಿತ್ತು. ನನ್ನನ್ನು ಹೋಟೆಲ್ ಗೇಟ್ನಲ್ಲಿ ನಿಲ್ಲಿಸುತ್ತಿದ್ದರು. ಕೆ.ಆರ್ ನಗರ ಸಚಿವರಿಂದ ಜಾತಿ ಹೆಸರಲ್ಲಿ ನಿಂದನೆ. ಇದನ್ನು ಸಹಿಸಲಾರದೆ ಪಕ್ಷ ಬಿಟ್ಟೆ. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟ ರೀತಿಯಲ್ಲೇ ಸ್ವಾಭಿಮಾನಕ್ಕಾಗಿ ನಾನು ಪಕ್ಷ ಬಿಟ್ಟಿದ್ದು ಎಂದರು.
ಸಿದ್ದರಾಮಯ್ಯ ಭ್ರಷ್ಟಾಚಾರಿ ಅಲ್ಲ. ಸಿದ್ದು ಒಳ್ಳೆಯ ಆಡಳಿತಗಾರ. ರಾಜ್ಯದ ಎಲ್ಲಾ ಜನತೆ ಸಿದ್ದರಾಮಯ್ಯರನ್ನು ಪ್ರೀತಿಸುತ್ತಾರೆ. ವಿಪಕ್ಷದವರು ಸಿದ್ದರಾಮಯ್ಯರನ್ನು ಇಷ್ಟಪಡುತ್ತಾರೆ. ನಾನು ಸಿದ್ದರಾಮಯ್ಯರನ್ನು ಇಷ್ಟಪಡುತ್ತೇನೆ. ಸಿದ್ದು ಪರ ಹಳ್ಳಿ ಹಕ್ಕಿ ಮೃಧುಧೋರಣೆ. ಸಿದ್ದು ಭಯದ ಮಾತನಾಡಬಾರದು. ದೇವೇಗೌಡರ ಬಗ್ಗೆಯೂ ಹಳ್ಳಿಹಕ್ಕಿ ಪ್ರೀತಿ. ನಾನು ಜೀವ ಇರುವವೇಗೂ ದೇವೇಗೌಡರ ಪೋಟೋಗೆ ಪೂಜೆ ಮಾಡುತ್ತೇನೆ. ದೇವರ ಮನೆಯಲ್ಲಿ ದೇವೇಗೌಡರ ಪೋಟೋ ಇಟ್ಟು ಪೂಜೆ ಮಾಡುತ್ತೇನೆ. ಅವರ ವಿರುದ್ದ ಒಂದು ಮಾತನಾಡುವುದಿಲ್ಲ. ನನಗೆ ರಾಜಕೀಯ ಸ್ಥೈರ್ಯ ಕೊಟ್ಟವರು ದೇವೇಗೌಡರು ಎಂದು ಟೀಕೆ ಬಿಟ್ಟು ಎದುರಾಳಿಗಳನ್ನು ವಿಶ್ವನಾಥ್ ಹೊಗಳಿದ್ದಾರೆ.