ನೆರೆಗೆ ಶಿಥಿಲಗೊಂಡ ಶಾಲಾ ಕೊಠಡ ನಿರ್ಮಾಣಕ್ಕೆ ಮುಂದಾದ ಚಿತ್ರತಂಡ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೆರೆ ಪೀಡಿತ ಕಲ೯ಕೊಪ್ಪ ಗ್ರಾಮವನ್ನು ಥಡ್೯ ಕ್ಲಾಸ್ ಚಿತ್ರತಂಡ ಗ್ರಾಮ ದತ್ತು ಪಡೆದು ನೆರೆಪೀಡಿತ ಸಂತ್ರಸ್ತರ ಸಮಸ್ಯೆ ಅರಿತುಕೊಳ್ಳಲು ಚಿತ್ರತಂಡ ಗ್ರಾಮ ವಾಸ್ತವ್ಯ ಹೂಡಿದೆ.

ಕರ್ಲಕೊಪ್ಪ ಗ್ರಾಮ 2005,2009,ಹಾಗೂ 2019ರಲ್ಲಿ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ತತ್ತರಿಸಿ ಹೋಗಿತ್ತು,2019ರಲ್ಲಿನ ಪ್ರವಾಹಕ್ಕೆ ಇಡೀ ಗ್ರಾಮವೇ ಮುಳುಗಿ ಆಸ್ತಿ-ಪಾಸ್ತಿ,ಶಾಲೆ ಕೊಠಡಿ ಹಾನಿಯಾಗಿವೆ.ಇದೀಗ ಥಡ್೯ ಕ್ಲಾಸ್ ಸಿನಿಮಾ ಕರ್ಲಕೊಪ್ಪ ಗ್ರಾಮ ದತ್ತು ಪಡೆದು ಶಾಲಾ ಕೊಠಡಿ ನಿರ್ಮಿಸಲು ನಿರ್ಧರಿಸಿದೆ. ಗ್ರಾಮ ದತ್ತು ಹಿನ್ನೆಲೆಯಲ್ಲಿ ಚಿತ್ರತಂಡ ಯುವ ನಟ ಜಗದೀಶ್ ಮತ್ತು ನಟಿ ರೂಪಿಕಾ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ನಿಮಿತ್ತ ನಿನ್ನೆ ಭೇಟಿ ನೀಡಿ,ಸಂತ್ರಸ್ತರ ಸಮಸ್ಯೆ ಆಲಿಸಿದ್ರು.

ನಟಿ ರೂಪಿಕಾ ಗ್ರಾಮದ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ರು. ಇನ್ನು ಗ್ರಾಮದ ಮಹಿಳೆಯರೊಂದಿಗೆ ಚಚೆ೯ ನಡೆಸಿದ್ರು ಇತ್ತ ಮಕ್ಕಳಿಗೆ, ಗ್ರಾಮಸ್ಥರಿಗೆ ಉಣಬಡಿಸಿ ತಾವು ಸಹ ಊಟ ಮಾಡಿದ್ರು‌. ಬಳಿಕ ಶಾಲಾ ಕೊಠಡಿಯಲ್ಲಿ ಊಟ ಮಾಡಿ ಮಲಗಿದ್ರು. ಕರ್ಲಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಚಿತ್ರತಂಡದಿಂದ ಮೂರು ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದು,1ರಿಂದ7ನೇ ತರಗತಿಯವರೆಗೆ 76ವಿದ್ಯಾರ್ಥಿಗಳು ಅಧ್ಯಾಯನ ಮಾಡ್ತಿದ್ದಾರೆ.

ಪ್ರವಾಹಕ್ಕೆ 7ಕೊಠಡಿ ಪೈಕಿ 5ಕೊಠಡಿ ಶಿಥಿಲವಾಗಿದ್ದು, ವಿದ್ಯಾರ್ಥಿಗಳು ತಾತ್ಕಾಲಿಕ ಶೆಡ್ ನಲ್ಲಿ ಕಲಿಕೆ ಮುಂದುವರೆಸಿದ್ದಾರೆ.ಇದೀಗ ಥರ್ಡ್ ಕ್ಲಾಸ್ ಚಿತ್ರ ತಂಡ 3ನೂತನ ಕೊಠಡಿ ನಿರ್ಮಿಸಲು ಮುಂದಾಗಿದೆ.ಇನ್ನು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯ ಶಿಥಿಲಗೊಂಡಿದ್ದ ಶಾಲಾ ಕೊಠಡಿಗಳನ್ನು ರಿಪೇರಿ ಮಾಡಿದೆ. ಥರ್ಡ್ ಕ್ಲಾಸ್ ಸಿನಿಮಾ ಬಿಡುಗಡೆಗೂ ಮುನ್ನ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದೆ. ಒಟ್ಟಿನಲ್ಲಿ, ಥಡ್೯ ಕ್ಲಾಸ್ ಚಿತ್ರತಂಡ ಗ್ರಾಮ ದತ್ತು ಪಡೆದು ಗ್ರಾಮ ವಾಸ್ತವ್ಯ ಮೂಲಕ ವಿನೂತನ ಪ್ರಯತ್ನ ಮಾಡಿದೆ.

ಇನ್ನು ನಟಿ ರೂಪಿಕಾ,ನಟ ಜಗದೀಶ್ ಸೇರಿದಂತೆ ಚಿತ್ರ ತಂಡ ಗ್ರಾಮಸ್ಥರಿಗೆ ರಾತ್ರಿ ಊಟಕ್ಕೆಂದು ಬಾಗಲಕೋಟೆ ನಗರದ ಮಾರುಕಟ್ಟೆಯಲ್ಲಿ ಸ್ವತಃ ತರಕಾರಿ, ದವಸಧಾನ್ಯ ಖರೀದಿಸಿ,ಚಿತ್ರ ತಂಡ ಅಡುಗೆ ತಯಾರಿಸಿ ಉಣಬಡಿಸಿದೆ. ನೆರೆ ಪೀಡಿತ ಕರ್ಲಕೊಪ್ಪ ಗ್ರಾಮ ದತ್ತು ಪಡೆದಿರೋದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡ ಗ್ರಾಮ ವಾಸ್ತವ್ಯ, ಸಾಮಾಜಿಕ ಕಾರ್ಯಗಳ ಮೂಲಕ ಚಿತ್ರದ ಪ್ರಮೋಷನ್ ಗೆ ಹೆಜ್ಜೆಯಿಟ್ಟಿದ್ದು , ಫೆಬ್ರವರಿ 7ರಂದು ಬಿಡುಗಡೆಯಾಗಲಿರೋ ಥರ್ಡ್ ಕ್ಲಾಸ್ ಸಿನಿಮಾಗೆ ಯಾವ ರೀತಿ ಬೆಂಬಲ ಸಿಗುತ್ತೇ ಅಂತ ಕಾದು ನೋಡಬೇಕಿದೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.