ಪಾಗಲ್ ಪ್ರೇಮಿಯಿಂದ ಪ್ರೀತಿಸಿದ್ದ ಯುವತಿಯ ಮನೆ ಮುಂದೆ ಧರಣಿ : ಮನವೊಲಿಸುವಲ್ಲಿ ಪೊಲೀಸರು ಯಶಸ್ವಿ

ಪ್ರೀತಿಸಿದ್ದ ಯುವತಿಯ ಮನೆ ಮುಂದೆ ಸಾಫ್ಟವೇರ್ ಎಂಜಿನಿಯರ್ ಧರಣಿ ನಡೆಸಿರುವ ಘಟನೆ ಹುಬ್ಬಳ್ಳಿಯ ವೆಂಕಟೇಶ್ವರ ಕಾಲೋನಿಯಲ್ಲಿ ನಡೆದಿದೆ.

ಆಂಧ್ರದ ಕಡಪ ಮೂಲದ ಚಕ್ರವರ್ತಿ ಮೆಂಟ್ ಎಂಬಾತನಿಂದ ಧರಣಿ ಮಾಡಲಾಗುತ್ತಿದೆ. ಸಿಡ್ನಿಯಲ್ಲಿ ಇಂಜಿನಿಯರ್ ಆಗಿರುವ ಚರ್ಕವರ್ತಿ ಮೆಂಟ್ ಗೆ ಮ್ಯಾಟ್ರಿಮೋನಿಯಲ್ಲಿ ಹುಬ್ಬಳ್ಳಿಯ ಹುಡುಗಿಯ ಪರಿಚಯವಾಗಿತ್ತು. ಪರಸ್ಪರ ಇಷ್ಟಪಟ್ಟು ಪ್ರೀತಿಸುತ್ತಿದ್ದರು. ಹುಡುಗಿಯನ್ನ ಮದುವೆಯಾಗಲು ಸಿಡ್ನಿಯಿಂದ ದೇಶಕ್ಕೆ ಮರಳಿದ್ದ ಮೆಂಟ್ ಹುಡುಗಿಯ ಮನೆಯವರೊಂದಿಗೆ ಮಾತುಕತೆ ನಡೆಸಿ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ.

ಇಬ್ಬರ ಜಾತಿ ಬೇರೆಯಾದ ಪರಿಣಾಮ ಮದುವೆಗೆ ಏಕಾಏಕಿ ನಿರಾಕರಣೆ‌ಯಾಗಿದೆ. ಹುಡುಗಿಯ ಮನೆಯವರು ವಿವಾಹಕ್ಕೆ ನಿರಾಕರಿಸಿದ್ದಾರೆ. ಪಾಗಲ್ ಪ್ರೇಮಿಯಾದ ಚಕ್ರವರ್ತಿ ಮೆಂಟ್‌ನಿಂದ ಯುವತಿ ಮನೆಮುಂದೆ ಪ್ರಹಸನ ಮಾಡುತ್ತಿದ್ದು, ಅವಳೇ ಬೇಕು ಎಂದು ಪಟ್ಟು ಹಿಡಿದು‌ ಧರಣಿ ಕುಳಿತುಕೊಂಡಿದ್ದಾನೆ.

ಆದರೆ ಯುವತಿ ಮನೆಯವರು ಮದುವೆಗೆ ನಿರಾಕರಿಸಿ ಪೊಲೀಸರಿಗೆ ಪತ್ರ ಬರೆದುಕೊಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನಿಗೆ ಧರಣಿ ಕೈಬಿಡಲು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights