ಪೇಜಾವರ ಶ್ರೀ ಅಗಲಿಕೆಗೆ ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿ ಹಾಗೂ ಗಣ್ಯರ ಸಂತಾಪ!

ಪೇಜಾವರ ಶ್ರೀ ಅಗಲಿಕೆಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ‌ ರಂಭಾಪುರಿ‌ ಪೀಠ ಸ್ವಾಮೀಜಿ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹೌದು… ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಷ್ಟ್ರಾಭಿಮಾನ ಸಂಸ್ಕೃತಿ ಸಂವರ್ಧನೆಯಲ್ಲಿ ಸ್ವಾಮೀಜಿ ಪಾತ್ರ ದೊಡ್ಡದು. ಪೇಜಾವರ ಶ್ರೀ ಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜೊತೆ ಅವಿನಾಭಾವ ಸಂಬಂಧ ಇತ್ತು. ಸ್ವಾಮೀಜಿಯ ಆಶಯಗಳು ಸಕಾರಗೊಳ್ಳಲಿ ಎಂದು ರಂಭಾಪುರಿ ಡಾ.‌ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ಸೂಚಿಸಿದ್ದಾರೆ.

ಪೇಜಾವರ ಶ್ರೀ ಅಸ್ತಂಗತ ಹಿನ್ನೆಲೆ ಮೈಸೂರು ಶ್ರೀಕೃಷ್ಣಧಾಮದಲ್ಲಿ ನೀರವ ಮೌನ ಆವರಿಸಿದೆ. ಮಠದ ಒಳಾವರಣದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪೂಜೆ ಮಾಡಲಾಗುತ್ತಿದೆ. ಮೈಸೂರಿನಲ್ಲಿ 2003, 2012, 2019ರಲ್ಲಿ ಒಟ್ಟು ಮೂರು ಬಾರಿ ಚಾತುರ್ಮಾಸ ಆಚರಣೆ  ಮಾಡಲಾಯಿತು. ಇದರಲ್ಲಿ ಕೊನೆಯ ಚಾತುರ್ಮಾಸ ವ್ರತ  ಪೇಜಾವರ ಶ್ರೀ ಆಚರಿಸಿದ್ದರು. ಒಮ್ಮೆ ಅಖಿಲ ಭಾರತ ಮಾಧ್ವ ಮಹಾಮಂಡಲ ಸಭೆ ಆಯೋಜನೆ ಕೂಡ ಮಾಡಿದ್ದರು. ಮೈಸೂರು ಮತ್ತು ಪೇಜಾವರ ಸ್ವಾಮೀಜಿ ಅವರದ್ದು ತಂದೆ- ಮಕ್ಕಳ ಸಂಬಂಧ.  ಕೃಷ್ಣ ಮಠದಷ್ಟೇ ಸಂತೋಷದಿಂದ ವಾಸ್ತವ್ಯ ಮಾಡುತ್ತಿದ್ದರು ಎಂದು ಮೈಸೂರಿನ ಒಡನಾಟದ ಬಗ್ಗೆ ಶ್ರೀ ಕೃಷ್ಣಧಾಮದ ಮೇಲ್ವಿಚಾರಕ ರಘುರಾಮ್ ರಾವ್ ಮಾಹಿತಿ ನೀಡಿದ್ದಾರೆ.

ಇನ್ನೂ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ದೈವಾಧೀನರಾದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳ ನಿಧನ‌ ನಾಡಿಗೆ ತೀವ್ರ ನೋವನ್ನು ತಂದಿದೆ. ಅವರ ಅಗಲಿಕೆಯಿಂದ ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.ಶ್ರೀಗಳು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ನಾಡಿನ ಎಲ್ಲಾ ಮಠಾಧೀಶರಿಗೆ ಮಾರ್ಗದರ್ಶಕರಾಗಿದ್ದರು. ಅವರ ಆಚಾರ ವಿಚಾರಗಳನ್ನು ಶ್ರೀಮಠ ಚಿರಾಯುವಾಗುವಂತೆ ನೋಡಿಕೊಳ್ಳುಬೇಕು ಎಂದು ಮರುಕ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳ ಶಿಷ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೋಳೆ ಗ್ರಾಮದ ಕಣ್ವಮಠದ ವಿದ್ಯಾಕಣ್ವ ವಿರಾಜ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ನಮ್ಮ ತಂದೆ ತಾಯಿಯಂದಿರು ಪೇಜಾವರ ಶ್ರೀಗಳಲ್ಲಿ ವೇದಾಧ್ಯಯನ ಮಾಡಲು ಬಿಟ್ಟರು. ಅವರು ಮನಸ್ಸಿನಿಂದ ನನ್ನನ್ನು ಸ್ವೀಕಾರ ಮಾಡಿದರು. ನಾನು ಅವರ ಮಾನಸ ಪುತ್ರ. ಸಮಾಜದ ಎಲ್ಲರನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗು. ಯಾರಿಗು ಬೇಸರವಾಗದಂತೆ ನೋಡಿಕೊಂಡು. ಕಣ್ವಮಠದ ಕೀರ್ತಿ ಮುಂದು ವರೆಸಿಕೊಂಡು ಹೋಗಬೇಕೆಂದು ಹೇಳಿದರು. ಈಗ ಅವರು ಇಲ್ಲ ಅವರು ತಪಸ್ವಿಗಳು ಮನೊ ಇಂದ್ರಿಯ ಮೂಲಕ ನಮ್ಮ ಜೊತೆ ಇದ್ದಾರೆ. ಅವರು ಈಗ ನಮ್ಮ ಜೊತೆ ಇದ್ದಂಗೆ ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights