ಪೈಲ್ವಾನ್ ಚಿತ್ರತಂಡದಿಂದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು….
ಪೈಲ್ವಾನ್ ಚಿತ್ರದ ಪೈರಸಿಯಾಗಿದೆ ಎಂದು ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣರಿಂದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಳೆದ ೧೨ ರಂದು ಪಂಚಭಾಷೆಗಳಲ್ಲಿ ತೆರೆಕಂಡಿದ್ದ ಪೈಲ್ವಾನ್ ಚಿತ್ರ, ಬಿಡುಗಡೆಯಾದ ಮರುದಿನವೇ ಪೈರಸಿಯಾಗಿದೆ ಎಂದು ದೂರು ನೀಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾವನ್ನ ಪೈರಸಿ ಮಾಡಿ ಹರಿಬಿಟ್ಟಿದ್ದಾರೆ.
ಈ ಬಗ್ಗೆ ಸುಮಾರು 3500ಕ್ಕೂ ಹೆಚ್ಚು ಲಿಂಕ್ ಗಳನ್ನ ಪೊಲೀಸರಿಗೆ ತಿಳಿಸಿ ಇಂದು ಸೈಬರ್ ಕ್ತೈಂ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸ್ವಪ್ನಕೃಷ್ಣ ತಿಳಿಸಿದ್ದಾರೆ. ದರ್ಶನ್ ಅಭಿಮಾನಿಗಳು ಸಿನಿಮಾವನ್ನ ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದ್ರು ಅದು ತಪ್ಪು.
ಆದರೆ ಪೈಲ್ವಾನ್ ಪೈರಸಿ ಆರೋಪಕ್ಕೆ ದರ್ಶನ್ ಫ್ಯಾನ್ಸ್ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿರೋ ದಚ್ಚು ಫ್ಯಾನ್ಸ್, ದರ್ಶನ್ ಹೆಸರು ಬಳಸಿಕೊಂಡು ಪೈಲ್ವಾನ್ ಸಿನಿಮಾಗೆ ಪ್ರಚಾರ ಗಿಟ್ಟಿಸಿಕೊಳ್ಳಬೇಡಿ, ತೊಂದೆರೆಯಾಗಿದ್ರೆ? ತಮಿಳ್ ರಾಕರ್ಸ್ ವಿರುದ್ಧ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿ, ಬೇರೆ ನಟನ ಫ್ಯಾನ್ಸ್ ಬಗ್ಗೆ ಅಪಪ್ರಚಾರ ಮಾಡಿ ಸಿನಿಮಾಗೆ ಪ್ರಚಾರ ಪಡೆದುಕೊಳ್ಳಬೇಡಿ, ನಿಮ್ಮ ಸಿನಿಮಾ ಪ್ರಚಾರಕ್ಕೆ ಆರ್ಥಿಕ ತೊಂದರೆ ಇದ್ದರೆ ದರ್ಶನ್ ಫ್ಯಾನ್ಸ್ ಆರ್ಥಿಕ ಸಹಾಯ ನಿಮಗೆ ಯಾವತ್ತು ಇರುತ್ತದೆ ಎಂದು ಡಿ ಬಾಸ್ ಫ್ಯಾನ್ಸ್ ಕೌಂಟರ್ ಕೊಟ್ಟಿದ್ದಾರೆ.
ಸದ್ಯ ಪೇಸ್ ಬುಕ್ ನಲ್ಲಿ ಪೈಲ್ವಾನ್ ಚಿತ್ರ ಅಪ್ ಲೋಡ್ ಮಾಡಿದ್ದ ಅಸಾಮಿ ವಿರುದ್ದ ನಿರ್ಮಾಪಕರ ದೂರು ಆಧರಿಸಿ ಸೈಬರ್ ಕ್ರೈಮ್ ಪೊಲೀಸರಿಂದ ಎಫ್ಐಆರ್ ದಾಖಲಾಗಿದೆ.