ಮುಂದುವರಿದ ಕೃಷ್ಣಾ ಹಾಗು ತುಂಗಭದ್ರಾ ನದಿ ಪ್ರವಾಹ : ೩.೦೧ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ರಾಯಚೂರಿನಲ್ಲಿ ಕೃಷ್ಣಾ ಹಾಗು ತುಂಗಭದ್ರಾ ನದಿ ಪ್ರವಾಹ ಮುಂದುವರಿದಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ ೩.೦೧ ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ ೨.೮೦ ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದೆ. ಅಪಾರ ನೀರು ನದಿಗೆ ಬಿಟ್ಟಿದ್ದರಿಂದ‌ ಲಿಂಗಸಗೂರು ತಾಲೂಕಿನ ಶೀಲಹಳ್ಳಿ, ದೇವದುರ್ಗಾ ತಾಲೂಕಿನ ಹೂವಿನ ಹೆಡಗಿ ಸೇತುವೆ ಮುಳುಗಡೆಯಾಗಿದೆ.

ಹೂವಿನ‌ ಹೆಡಗಿ ಸೇತುವೆ‌ ಮುಳುಗಡೆಯಾದ ಹಿನ್ನೆಲೆ ರಾಯಚೂರು ಕಲಬುರಗಿ ಮಧ್ಯೆ ಸ್ಥಗಿತ ಕೊಪ್ಪರದ ಶ್ರೀ ಲಕ್ಷ್ಮಿ ನರಸಿಂಹ‌ ದೇವಸ್ಥಾನದ ಸುತ್ತ ನೀರು ತುಂಬಿಕೊಂಡಿದ್ದು, ಕೆಲವಡೆ ಭೂಮಿಗೆ ನೀರು ನುಗ್ಗಿದೆ.

ತುಂಗಭದ್ರಾ ನದಿಯಲ್ಲಿಯೂ ಪ್ರವಾಹ ಹೆಚ್ಚಾಗಿದೆ. ತುಂಗಭದ್ರಾ ಜಲಾಶಯದಿಂದ ೧.೫೦ ಲಕ್ಷ ನೀರು ಬಿಟ್ಟಿರುವ ಹಿನ್ನೆಲೆ ಹಲವಡೆ ಭೂಮಿಗೆ ನೀರು ನುಗ್ಗಿದೆ. ಎಲೆಬಿಚ್ಚಾಲಿ ಯ ರಾಯರ ಬೃಂದಾವನ ಮುಳುಗಡೆಯಾಗಿದೆ. ಪ್ರವಾಹ ಪರಿಸ್ಥಿತಿ ಹಿನ್ನೆಲೆ ರಕ್ಷಣಾ ಕಾರ್ಯಕ್ಕೆ ಜಿಲ್ಲಾಡಳಿತ ಸೇನೆಯ‌ ನೆರವು ಕೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights