ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಸಿದ್ದರಾಮಯ್ಯರನ್ನ ಹೊಗಳಿದ ಪ್ರತಾಪ್‌‌ಸಿಂಹ!

ರಾಜಕೀಯ ಕೆಸರೆರೆಚಾಟದ ನಡುವೆಯೂ ಕೊಡಗು-ಮೈಸೂರು ಸಂಸದ ಪ್ರತಾಪ್​ ಸಿಂಹ ಮೈಸೂರಿನವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಂಗಳೂರು ಗಲಭೆ ವಿಚಾರವಾಗಿ ತೀವ್ರ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದ ಪ್ರತಾಪ್‌ಸಿಂಹ, ಸಿದ್ದರಾಮಯ್ಯ ಸೃಷ್ಟಿಸಿದ ಮರಿಟಿಪ್ಪುಗಳೇ  ಮಂಗಳೂರು ಗಲಭೆಗೆ ಕಾರಣ ಎಂದು ಗುಡುಗಿದ್ದರು.  ಮೈಸೂರಿನ ಹಲವು ವೇದಿಕೆಗಳಲ್ಲಿ ಇವರಿಬ್ಬರ ವಾಕ್ಸಮರ ಯಾವಾಗಲೂ ಇದ್ದೇ ಇರುತ್ತದೆ.

  

ಹೀಗಿದ್ದರು ಪ್ರತಾಪ್ ಸಿಂಹ ಸಿದ್ದರಾಮಯ್ಯನವರನ್ನ ಹೊಗಳಿದ್ದು ಆಶ್ಚರ್ಯ ಮೂಡಿಸಿದೆ. ಬಿಜೆಪಿ ಸಂಸದ ಪ್ರತಾಪ್‌‌ಸಿಂಹ ಫೇಸ್‌ಬುಕ್  ಹಾಗೂ ಟ್ವಿಟರ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಿರುವ ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.  ಅಷ್ಟೇ ಅಲ್ಲದೇ, ಪ್ರತಾಪ್‌ಸಿಂಹ ಸಿದ್ದರಾಮಯ್ಯರನ್ನು ಸಾಹೇಬ್ರು ಎಂದು ಉಲ್ಲೇಖಿಸಿ ಪೋಸ್ಟ್ ಹಾಕಿದ್ದಾರೆ.

ಆತ್ಮಿಯನ್ನ ನೋಡಲು ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರತಾಪ್‌ಸಿಂಹ ಆಸ್ಪತ್ರೆಯ ಅತ್ಯಾಧುನಿಕ ವ್ಯವಸ್ಥೆ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕಾರಣರಾದ ಸಿದ್ದರಾಮಯ್ಯರಿಗೆ ಧನ್ಯವಾದ ಎಂದ ಪೋಸ್ಟ್ ಮಾಡಿದ್ದಾರೆ. ಸಿದ್ದು ಜೊತೆ ಶಾಸಕ ವಾಸು,ಜಯದೇವ ಆಸ್ಪತ್ರೆ ನಿರ್ದೇಶ ಡಾ.ಮಂಜುನಾಥ್, ಡಾ.ಸದಾನಂದ‌ಗೌಡರಿಗು ಧನ್ಯವಾದ ಎಂದು ಪೋಸ್ಟ್ ಮಾಡಿರುವುದು ಆಶ್ಚರ್ಯ ಮೂಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights