ಬಂದ್ರೂ ಹೋದರು.. ನಾಡ ದೊರೆ ಬಿ ಎಸ್ ವೈ ವಿರುದ್ಧ ಸಂತ್ರಸ್ತರ ಆಕ್ರೋಶ…
ನಾಡ ದೊರೆ ಬಿ ಎಸ್ ವೈ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದಿದೆ.
ಬಂದ್ರೂ ಹೋದರು..ನಮ್ಮನ್ನು ಏನು ಕೇಳಲೇ ಇಲ್ಲಾ. ನಮ್ಮನ್ನ ಜೈಲಿಗೆ ಹಾಕಲಿ ನಾವು ಮಾತನಾಡೋರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆ ಪೀಡಿತ ಗ್ರಾಮವಾದ ಕೂಡಲ, ನಾಗನೂರು, ಕುಣಿಮೆಳ್ಳಿಹಳ್ಳಿ ಸೇರಿದಂತೆ ಹಲವು ಗ್ರಾಮಗಳ ನೆರೆ ವೀಕ್ಷಣೆ ಮಾಡಲು ಆಗಮಿಸಿದ್ದ ಸಿಎಂ, ನಮ್ಮ ಮನೆಗಳು ಬಿದ್ದಿವೆ ನಾವು ಮಲಗೋದು ಕಷ್ವವಾಗಿದೆ ಎಂದು ದೂರಿದ ಸಂತ್ರಸ್ತ ಮಹಿಳೆಯರ ಮಾತನ್ನ ಕೇಳಿ ಹೋಗಿದ್ದಾರೆ.
ತಮ್ಮ ಅಳಲನ್ನು ಸಿಎಂ ಎದುರು ಹೇಳಿಕೊಳ್ಳಲು ಮಹಿಳೆಯರು ನಿಂತಿದ್ದರೂ ನಮ್ಮ ಮನವಿಯನ್ನೆ ಸಿಎಂ ಆಲಿಸಲಿಲ್ಲಾ ಎಂದು ಸಂತ್ರಸ್ತರು ಕಿಡಿ ಕಾರಿದ್ದಾರೆ.
ಕೈಮುಗಿದು ನಮ್ಮ ಮನವಿ ಆಲಿಸಿ ಎಂದ ಬೇಡಿಕೊಂಡ ಮಹಿಳೆಯರ ಗೋಳನ್ನು ವಾಟ್ಸ್ಪ್ ಮೂಲಕ ಯುವಕರು ಹರಿಬಿಟ್ಟದ್ದಾರೆ.