ಬಡಕುಟುಂಬಗಳಿಗೆ ಔಷಧಿ ವಿತರಿಸೋ ಕಾರ್ಯದಲ್ಲಿ ಧೂದ್​ಪೇಡ ದಿಗಂತ್!

ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಅದೇಷ್ಟೋ ಜನರಿಗೆ ಚಿಕಿತ್ಸೆ ಹಾಗೂ ಔಷಧಿಗಳ ಖರೀದಿ ಅಷ್ಟು ಸುಲಭವಾಗುತ್ತಿಲ್ಲ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ  ಮೆಡಿಷನ್ ತೆಗೆದುಕೊಳ್ಳುವುದು ಕೈಗೆಟಕದ ಮಾತು. ಹೀಗಾಗಿ ನಟ ದಿಗಂತ್  ಕಷ್ಟದಲ್ಲಿರುವವರಿಗೆ ಔಷಧಿ ವಿತರಿಸೋ ಕಾರ್ಯದಲ್ಲಿ ತೊಡಗಿದ್ದಾರೆ.

ಎಸ್…  ಕೊರೊನಾ ವೈಸರ್ ಹರಡುವ ಲಕ್ಷಣಗಳು ಕಾಣಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ 3 ರಿಂದ ಮೇ 17ರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಹೀಗಾಗಿ ಬಡಕುಟುಂಬಗಳಿಗೆ ಭಾರೀ ಅನಾನುಕೂಲಗಳಾಗಿವೆ. ಎಲ್ಲೆಡೆ ಲಾಕ್​ಡೌನ್​ನಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಒಂದೊತ್ತಿನ ಊಟಕ್ಕಾಗಿ ದಿನಗೂಲಿ ಮಾಡುತ್ತಿದ್ದ ಕುಟುಂಬಗಳು ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಇದೇ ಹೊತ್ತಿನಲ್ಲಿ ಬಡ ಜನರ ನೆರವಿಗೆ ನಿಂತಿದ್ದಾರೆ ಸ್ಯಾಂಡಲ್​ವುಡ್ ನಟ ಧೂದ್​ಪೇಡ ದಿಗಂತ್. ದಿಗಂತ್ ಅವರು ನೊಂದ ರೋಗಿಗಳ ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡುವ ವಿನೂತನ ಕಾರ್ಯ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights