ಬಾಗಲಕೋಟೆಗೆ ಇಂದು ಸಿಎಂ ಬಿಎಸ್ವೈ ಭೇಟಿ : ನೆರೆಪೀಡಿತ ಪ್ರದೇಶಗಳ ಹಾನಿ ವೀಕ್ಷಣೆ

ನೆರೆ ಪರಿಹಾರಕ್ಕೆ ಕೇಂದ್ರ ಮೌನ ವಿಚಾರಕ್ಕೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಇಂದು ಮುಖ್ಯಮಂತ್ರಿ ಬಿಎಸ್ವೈ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ ೨ಕ್ಕೆ ಜಿಲ್ಲೆ ಆಗಮಿಸಲಿರೋ ಸಿಎಂ ಬಿಎಸ್ ಯಡಿಯೂರಪ್ಪ ನೆರೆಪೀಡಿತ ಪ್ರದೇಶಗಳ ಹಾನಿ ವೀಕ್ಷಣೆ ಮಾಡಲಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಿಂದ ಮಹಾಲಿಂಗಪೂರ ರಸ್ತೆ ಮಾರ್ಗವಾಗಿ ಮುಧೋಳಕ್ಕೆ ಆಗಮಿಸಿ, 2:45ಕ್ಕೆ ಮುಧೋಳ-ಯಾದವಾಡ ಸೇತುವೆ ವೀಕ್ಷಣೆ, 3:15ಕ್ಕೆ ಮುಧೋಳ ತಾಲೂಕಿನ ಚಿಚಖಂಡಿ ಬ್ಯಾರೇಜ್ ಮತ್ತು ಬೆಳೆಹಾನಿ ವೀಕ್ಷಣೆ, 4:30ಕ್ಕೆ ಬಾಗಲಕೋಟೆಯ ಜಿಪಂ ಸಭಾ ಭವನದಲ್ಲಿ ಅಧಿಕಾರಿಗಳೊಂದಿಗೆ ಪ್ರವಾಹ ಪರಿಹಾರ, ಅಭಿವೃದ್ಧಿ ಕಾಯ೯ಕ್ರಮಗಳ ಪರಿಶೀಲನಾ ಸಭೆ ನಡೆಸಿಲಿದ್ದಾರೆ.

ಡಿಸಿಎಂ ಕಾರಜೋಳ ಸೇರಿದಂತೆ ಜಿಲ್ಲೆಯ ಶಾಸಕರು ಸಿಎಂ ಯಡಿಯೂರಪ್ಪಗೆ ಸಾಥ್ ನೀಡಲಿದ್ದಾರೆ. ಸಭೆ ಬಳಿಕ ಬಾಗಲಕೋಟೆಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಸಿಎಂ ಯಡಿಯೂರಪ್ಪ ತೆರಳಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights