ಬಿಗ್ ಬಾಸ್ ಕನ್ನಡ ಸೀಸನ್ 7 : ಅಲ್ಲಿದೆ ಹಳೆಯ ಬಿಗ್ ಬಾಸ್ ಮನೆ ಇಲ್ಲಿಗೆ ಬಂದೆ ಸುಮ್ಮನೆ
ಬಿಗ್ ಬಾಸ್ ಕನ್ನಡ ಸೀಸನ್ 7 ನಲ್ಲಿ ಸ್ಪರ್ಧಿಗಳ ಆಟ ಬಲೂ ಜೋರಾಗೇ ನಡಿತಿದೆ. ಅದ್ರಲ್ಲೂ ಇಬ್ಬರು ಹುಡುಗಿಯರ ಕ್ಯಾಪ್ಟನ್ಸಿಯಲ್ಲಿ ಅಂದ್ರೆ ಮತ್ತಷ್ಟು ಇಂಟ್ರಸ್ಟಿಂಗ್ ಮೂಡಿಸಿದೆ.
ಹೌದು.. ಈ ವಾರದ ಬಿಗ್ಬಾಸ್ ಎಪಿಸೋಡ್ಸ್ ಕುತೂಹಲಕಾರಿಯಾಗಿರುತ್ತೆ ಅನ್ನೋದು ವಾರದ ಮೊದಲ ದಿನವೇ ಗೊತ್ತಾಗಿದೆ. ಯಾಕಂದ್ರೆ, ಬಿಗ್ಬಾಸ್ ಸ್ಪರ್ಧಿಗಳಿಗೆ ವಾರದ ಮೊದಲ ದಿನವೇ ಶಾಕ್ ಕೊಟ್ಟಿದ್ದು, ಮನೆಯನ್ನೇ ಖಾಲಿ ಮಾಡಿಸಿದ್ದಾರೆ. 29 ದಿನಗಳು ಇದ್ದ ವ್ಯವಸ್ಥೆಗಳು ಈ ವಾರ ಇರೋದಿಲ್ಲ. ನೆಲದ ಮೇಲೆ ಮಲಗಬೇಕು! ಚಿಕ್ಕ ಜಾಗದಲ್ಲಿಯೇ ಈ ವಾರ ದೂಡಬೇಕು.
ಬಿಗ್ಬಾಸ್ನ ಹಲವು ಟಾಸ್ಕ್ಗಳು ಜೀವನಕ್ಕೆ ಹತ್ತಿರವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದ್ರೆ ಮಾತ್ರ ಇದು ಅರ್ಥವಾಗುತ್ತದೆ. ಈ ವಾರದ ಟಾಸ್ಕ್ ಕೂಡ ಇಂತಹದ್ದೇ ಅಂತಾ ಹೇಳಬಹುದು. ನಿನ್ನೆ ಪ್ರಸಾರವಾದ ಎಪಿಸೋಡ್ನಲ್ಲಿ ಬಿಗ್ಬಾಸ್ ಕೇವಲ ಮನೆಯನ್ನ ಖಾಲಿ ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ವಸ್ತುಗಳನ್ನ ಶಿಫ್ಟ್ ಮಾಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ನಿರ್ಮಿಸಿರೋ ಪುಟ್ಟ ಮನೆಯಲ್ಲಿ ಈಗ ಎಲ್ಲರೂ ಇದ್ದಾರೆ. ಅಡುಗೆ ಸಾಮ್ರಾಗಿಗಳನ್ನು ಕೂಡ ಇದೇ ಮನೆಗೆ ವರ್ಗಾಯಿಸಲಾಗಿದೆ. ಈ ಮನೆಯಲ್ಲಿ ಬಿಗ್ಬಾಸ್ ಸ್ಪರ್ಧಿಗಳನ್ನ ಹೇಗೆ ಆಟವಾಡಿಸ್ತಾರೆ ಅಂತಾ ಇವತ್ತು ತಿಳಿಯಲಿದೆ. ಈ ಪುಟ್ಟ ಮನೆಯಲ್ಲಿ ಸ್ಪರ್ಧಿಗಳು ಹೇಗಿರ್ತಾರೆ ಅನ್ನೋ ಕುತೂಹಲವೂ ಮನೆ ಮಾಡಿದೆ.