ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ : ದುರ್ಗಾ ಪೂಜೆಯಲ್ಲಿ ನಮೋ ಭಾಗಿ!

ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತೀವ್ರ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬಂಗಾಳದ ಪ್ರಸಿದ್ಧ ದುರ್ಗಾ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಅಕ್ಟೋಬರ್ 22 ರಂದು ಬಂಗಾಳದ ಜನಪ್ರಿಯ ಉತ್ಸವದ ಎರಡನೇ ದಿನದ ದೊಡ್ಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಂಗಾಳದ ದುರ್ಗಾ ಪೂಜೆ ಅಕ್ಟೋಬರ್ 21 ರಂದು ಅಕಲ್ ಬೋಧನ್ ನೊಂದಿಗೆ ಪ್ರಾರಂಭವಾಗುತ್ತದೆ. ನಂತರ ಅಕ್ಟೋಬರ್ 25 ಅಥವಾ ವಿಜಯದಶಾಮಿ ವರೆಗೆ ಮುಂದುವರಿಯುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದನ್ನು ಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ. ಎಲ್ಲರೂ ಈ ಸಮಯದಲ್ಲಿ ಹಬ್ಬದ ಸಂತಸದಲ್ಲಿರುತ್ತಾರೆ. ಈ ವೇಳೆ ನಮೋ ಪ.ಬಂಗಾಳಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ.

ಜೊತೆಗೆ ವರ್ಚುವಲ್ ರ್ಯಾಲಿಯನ್ನು ಮಧ್ಯಾಹ್ನ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ. ಈ ಸಮಯದಲ್ಲಿ ಹೆಚ್ಚಿನ ಜನರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಸಲು ಸೂಚಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದಾದ ಪಾಂಡಲ್‌ಗಳನ್ನು  ಗುರುತಿಸಾಗಿದ್ದು, ಇಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಜೊತೆಗೆ ಪಿಎಂ ಮೋದಿಯವರೇ ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಶಾಂತಿಯುತ ಕಾರ್ಯಕ್ರಮಗಳಲ್ಲಿ ಪಿಎಂ ಕೂಡ ಭಾಗವಹಿಸಲಿದ್ದಾರೆ.

ಕಳೆದ ವರ್ಷ ಗೃಹ ಸಚಿವ ಅಮಿತ್ ಷಾ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದರು. ಪಂಡಲ್‌ಗಳನ್ನು ಉದ್ಘಾಟಿಸಿದರು. ಆದರೆ ಈ ವರ್ಷ ಅಕ್ಟೋಬರ್ 17 ರಂದು ದುರ್ಗಾ ಪೂಜೆಗೆ ಪ್ರಧಾನಿ ಮೋದಿ ಉತ್ತರ ಬಂಗಾಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights