ಬಿಜೆಪಿಯ ಗಂಡಸ್ತನಕ್ಕೆ ಸವಾಲ್ ಹಾಕಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ……!
ಬಿಜೆಪಿಯ ಗಂಡಸ್ತನಕ್ಕೆ ಸವಾಲ್ ಹಾಕಿದ್ದಾರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ.
ಹೌದು… ಬಿಜೆಪಿಯ ಗಂಡಸ್ತನಕ್ಕೆ ಸವಾಲ್ ಹಾಕಿ, ಬಿಜೆಪಿಯಲ್ಲಿ ಗಂಡಸರೇ ಇಲ್ಲಾ ಎಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೆ ಇಲ್ಲ, ತಾಕತ್ತಿದ್ದರೆ ನನ್ನ ಮೇಲಿನ ಆರೋಪದ ದಾಖಲೆ ಹಿಡಿದು ಸಾಬೀತು ಮಾಡಲಿ ಎಂದು ಸವಾಲ್ ಹಾಕಿದ್ದಾರೆ. ನನ್ನ ವಿರುದ್ದದ ಆರೋಪಗಳನ್ನ ತೊಡೆತಟ್ಟೆ ಸಾಬೀತುಪಡಿಸಿ ಗಂಡಸ್ತನ ತೋರಿಸಲಿ. ಇಲ್ಲಿ ಯಾವೋನೂ ಗಂಡಸರೇ ಇಲ್ಲಾ ತಾಕತ್ತಿದ್ದರೆ ನನ್ನ ವಿರುದ್ದ ಸ್ಪರ್ಧಿಸಲಿ. ಯಾರೋ ಸೋಮಣ್ಣ, ಅಂತೆ ಇನ್ಯಾವನೋ ಅಂತೆ. ಚುನಾವಣೆ ಬಂದಾಗ ಅರಸೀಕೆರೆಯಲ್ಲಿ ಬಿಜೆಪಿ ಟಿಕೆಟ್ ಖಾಲಿ ಇದೆ ಬನ್ನಿ ಬನ್ನಿ ಅಂತಾ ಕರೆಸುತ್ತಾರೆ.
ಶಾಸಕರಾಗುವುದಕ್ಕೂ ಮೊದಲುನೆ ನಿರ್ಮಿಸಿದ್ದ ಕಳೆದ 30 ವರ್ಷಗಳ ಹಿಂದೆ ಅರಸೀಕೆರೆಯ ಕೆಎಚ್,ಬಿ ಕಾಲೋನಿಯಲ್ಲಿ ಮನೆ ನಿರ್ಮಿಸಿರುವ ಶಾಸಕ ಶಿವಲಿಂಗೇಗೌಡ. ಆದರೆ ಆ ಮನೆಗಳನ್ನು ನಿರ್ಮಿಸಿರುವ ಜಾಗ ಸಿಎ ನಿವೇಶನ ಎಂದು ಆರೋಪಿಸಿದ್ದ ಅರಸೀಕೆರೆ ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಈ ಆರೋಪ ಸಾಬೀತುಪಡಿಸಲಿ ಎಂದು ಶಾಸಕ ಶಿವಲಿಂಗೇಗೌಡ ಬಿಜೆಪಿಗೆ ಸವಾಲ್ ಹಾಕಿದ್ದಾರೆ.
ತಾಕತ್ತಿದ್ದರೆ ಅರಸೀಕೆರೆ ಬಿಜೆಪಿಯವರು ಸ್ಪರ್ಧಿಸಲಿ. ನಾನು ಅಭಿವೃದ್ಧಿ ಕೆಲಸ ಮಾಡುವಾಗ ಅಡ್ಡಿ ಬರ್ತಾವೆ ಇವು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆದಿದ್ದಾರೆ.