ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಕನಕಪುರ ಬಂಡೆಯಿಂದ ಚಾಟಿ…!
ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕನಕಪುರದಲ್ಲಿ ಮುಸ್ಲಿಂ ಸಮುದಾಯದವರ ಬೃಹತ್ ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದು, ಈ ವೇಳೆ ಮಾತನಾಡುವಾಗ ವೇದಿಕೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
ಕೆಲವರು ಪಂಕ್ಚರ್ ಹಾಕೋರು, ಕಸಗುಡಿಸೋರು ಪ್ರತಿಭಟನೆ ಮಾಡ್ತಿದ್ದಾರೆಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಟೂವಾಗಿ ಹೇಳಿದ್ದರು. ಈ ಮಾತಿಗೆ ಚಾಟಿ ಬೀಸಿದ ಡಿಕೆ ಶಿವಕುಮಾರ್ ನೀವು ಬಡವರಿಗೆ ವಿದ್ಯಾಭ್ಯಾಸ ಕೊಡಿ, ಉದ್ಯೋಗ ಕೊಡಿ ಸ್ವಾಮಿ. ಅವರು ಯಾಕೆ ಪಂಕ್ಚರ್ ಹಾಕ್ತಾರೆ, ಕಸ ಗುಡಿಸ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಅವರು ಕಸಗುಡಿಸದಿದ್ದರೆ ನೀವು ಇರಲು ಸಾಧ್ಯನಾ..? ಅವರೇ ಇವತ್ತು ಸ್ವಚ್ಛ ಭಾರತ ಮಾಡ್ತಿರೋದು ಎಂದು ಕನಕಪುರದ ಮಿನಿವಿಧಾನಸೌಧದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ತೇಜಸ್ವಿ ಸೂರ್ಯಗೆ ಟಾಂಗ್ ಕೊಟ್ಟಿದ್ದಾರೆ.