ಬಿಜೆಪಿ ಸ್ಥಳೀಯ ನಾಯಕ ಅರುಣ್ ಕುಮಾರ್ ಪಾಲಾದ ರಾಣೇಬೆನ್ನೂರು ಟಿಕೇಟ್…
ಇಬ್ಬರ ಕಾದಾಟ ಮೂರನೇಯವರಿಗೆ ಲಾಭ ಎನ್ನುವಂತೆ ಹಾವೇರಿ ಜೆಲ್ಲೆಯ ರಾಣೇಬೆನ್ನೂರು ಟಿಕೇಟ್ ಪರರ ಪಾಲಾಗಿದೆ. ಹೌದು.. ರಾಣೇಬೆನ್ನೂರು ಟಿಕೇಟ್ ಆರ್. ಶಂಕರ್ಗೂ ಇಲ್ಲ, ಈಶ್ವರಪ್ಪ ಮಗನಿಗೂ ಇಲ್ಲ. ಬದಲಿಗೆ ಅರುಣ್ ಕುಮಾರ್ ಪಾಲಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ಸೇರಿದ ಅನರ್ಹ ಶಾಸಕ ಆರ್ ಶಂಕರ್ಗೆ ತಪ್ಪಿದ ಟಿಕೆಟ್ ಅನ್ನು ಕ್ಷೇತ್ರದ ಬಿಜೆಪಿ ಸ್ಥಳೀಯ ನಾಯಕ ಅರುಣ್ ಕುಮಾರ್ ಪೂಜಾರ ಅವರಿಗೆ ನೀಡಲು ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪೂಜಾರ್ ಅವರಿಗೆ ನೀಡಲಾಗಿದೆ. ಅನರ್ಹ ಶಾಸಕ ಆರ್.ಶಂಕರ್ ಬಿಜೆಪಿ ಸೇರಿದ್ರೂ ಪಕ್ಷ ಟಿಕೆಟ್ ನೀಡಿರಲಿಲ್ಲ. ಬದಲಾಗಿ ಎಂ.ಎಲ್.ಸಿ ಮಾಡಿ ಸಚಿವರನ್ನಾಗಿ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.