ಬೆಂಗಳೂರಿಗೆ ದುಡಿಯಲು ಹೋಗಿದ್ದ ಯುವಕನ ಕಿಡ್ನಾಪ್ : ಸ್ನೇಹಿತನಿಗೆ ಬಂದಿತ್ತು ಫೋನ್ ಕಾಲ್…

ಬೆಂಗಳೂರಿಗೆ ದುಡಿಯಲು ಹೋಗಿದ್ದ ರಾಯಚೂರಿನ ಲಿಂಗಸುಗೂರು ತಾಲೂಕಿನ ಗೋನವಾಟ್ಲ ತಾಂಡಾ-2ರ ಯುವಕನನ್ನು ಅಪಹರಣ ಮಾಡಿದ ಘಟನೆ ನಡೆದಿದೆ.

ಪ್ರಕಾಶ ರಾಠೋಡ್ ಎಂಬ ಯುವಕ ಅಪಹರಣವಾಗಿದ್ದಾನೆ. ಪ್ರಕಾಶ ರೋಠೋಡ ಹಾಗೂ ಪತ್ನಿ ಮೌನಿಕ ಕಳೆದ ತಿಂಗಳು ಬೆಂಗಳೂರಿಗೆ ದುಡಿಯಲು ಹೋಗಿದ್ದರು. ಇದೇ ಭಾನುವಾರ ಮಧ್ಯಾಹ್ನ ಮನೆಗೆ ಆಗಮಿಸಿದ್ದ ಅಪರಿಚಿತರಿಂದ ವಾಹನದಲ್ಲಿ ಅಪಹರಿಸಿಕೊಂಡು ಹೋಗಿದ್ದಾಗಿ ಪ್ರಕಾಶ್ ಪತ್ನಿ ಮೋನಿಕಾ ಹೇಳುತ್ತಿದ್ದಾರೆ.

ಅಪಹರಣದ ನಂತರ ಪ್ರಕಾಶ ತನ್ನ ಸ್ನೇಹಿತ ಮಂಜುನಾಥನಿಗೆ ಮೊಬೈಲ್ ಕರೆ ಮಾಡಿದ್ದ ಎನ್ನಲಾಗಿದೆ. ಕರೆಮಾಡಿ ಅಪಹರಣ ಮಾಡಿದ ಬಗ್ಗೆ ಪ್ರಕಾಶ ರೋಠೋಡ ತಿಳಿಸುವ ವೇಳೆ ಅಪಹರಣಕಾರರು ಮೊಬೈಲ್ ಕಸಿದುಕೊಂಡು ಸ್ವಿಚ್‌ಆಫ್ ಮಾಡಿದ್ದಾರೆ ಎಂದು ಮಂಜುನಾಥ್ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಫೋನ್ ಮಾಡಿದ ಅಪರಿಚಿತರು ನಿಮ್ಮ ಪ್ರಕಾಶ ನಮಗೆ 3 ಲಕ್ಷ ರೂ. ಕೊಡಬೇಕು. ನೀವು ಬಂದು ಹಣ ನೀಡಿದರೆ ಸರಿ ಇಲ್ಲದಿದ್ದರೆ ಮುಂದೇನಾಗುತ್ತೋ ಗೊತ್ತಿಲ್ಲವೆಂದು ಹೆದರಿಸಿರುವುದಾಗಿ ಮಂಜುನಾಥ್ ಹೇಳಿದ್ದಾರೆ.

ಇನ್ನೂ ಪ್ರಕಾಶ್ ಸಹೋದರ ಸಂತೋಷ ಮುಧೋಳ ಮೂಲದ ಸಿರಸಪ್ಪ ಅನ್ನುವವರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ. ಕಿಡ್ನಾಪ್ ಮಾಡಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ.  ಪ್ರಕಾಶ್ ಗೆ ಮೂರು ವರ್ಷಗಳ ಹಿಂದೆ ಕಬ್ಬು ಕಟಾವಿಗೆ ಸಿರಸಪ್ಪ ಅನ್ನುವವರು ಮೂರು ಲಕ್ಷ ಹಣ ಕೊಟ್ಟಿದ್ರು. ಆ ಹಣವನ್ನು ತಂದು ಕೊಟ್ಟು ಪ್ರಕಾಶ್ ರನ್ನ ಕರೆದುಕೊಂಡು ಹೋಗ್ರಿ ಎಂದು ಹೇಳ್ತಿದ್ದಾರೆ ಎಂದ ಪ್ರಕಾಶ ಸಹೋದರ ಾರೋಪ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights