ಬೈಕ್ -ಟ್ರ್ಯಾಕ್ಟರ್ ಮಧ್ಯೆ ಅಪಘಾತ : ಇಬ್ಬರ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ…

ಬೈಕ್ -ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ  ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ನಡೆದಿದೆ.

ಹನಮಪ್ಪ ನಾಯ್ಕರ್(65),ರುದ್ರವ್ವ ನಾಯ್ಕರ(55) ಸ್ಥಳದಲ್ಲೇ ಮೃತಪಟ್ಟ ದಂಪತಿ. ಮೃತರು ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದವರು.‌ ಹಿರೇಶೆಲ್ಲಿಕೇರಿಯಿಂದ ಕಾತರಕಿ ಸೇತುವೆ ಮೂಲಕ ಬೈಕ್ ನಲ್ಲಿ ನಾಲ್ವರು ಜಾನಮಟ್ಟಿ ಗ್ರಾಮಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ.

25ವರ್ಷದ ಯಲ್ಲಪ್ಪ ಚಿಗರಿ, ೧೩ವರ್ಷದ ಬಾಲಕಿ ಚಂದ್ರವ್ವಳಿಗೆ ಗಂಭೀರ ಗಾಯಗೊಂಡಿದ್ದು ಬಾಗಲಕೋಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಟ್ರ್ಯಾಕ್ಟರ್ ಚಕ್ರದಡಿ ಬೈಕ್  ಸಿಲುಕಿಕೊಂಡು ಅಪಘಾತ ಸಂಭವಿಸಿದ್ದು ಇಬ್ಬರು ಪ್ರಾಣವನ್ನೇ ಕಳೆದುಒಂಡಿದ್ದಾರೆ.

ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights