fact check: ಮೊಬೈಲ್‌ ಚಾರ್ಜ್‌ ಮಾಡುವಾಗ ಗಾಯಗೊಂಡ ಯುವತಿ; ಜಾಗೃತಿ ವಿಡಿಯೊ ಹೊರತು ನಿಜವಾದ ಘಟನೆಯಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ಒಂದು ವಿಡಿಯೋ ಬಗ್ಗೆ ತಿಳಿದು ಕೊಳ್ಳಲು ಈ ಸ್ಟೋರಿಯನ್ನು ರೂಪಿಸಲಾಗಿದೆ. ಫೋನ್ ಚಾರ್ಜ್ ಮಾಡುವ ವೇಳೆ ಹುಡುಗಿ ಪದೇ ಪದೇ ತನ್ನ ಫೋನ್ ಚೆಕ್ ಮಾಡುತ್ತಾ, ಓದುತ್ತಾ ತನ್ನ ಸೋಫಾದ ಮೇಲೆ ಮೊಬೈಲ್ ಇಟ್ಟುಕೊಂಡಿರುವ ವಿಡಿಯೋ ಕಾಣಬಹುದಾಗಿದೆ.

ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿರುವ ಈ ದೃಶ್ಯಾವಳಿಗಳನ್ನು ಗಮನಿಸಿ- ಚಾರ್ಜ್ ಆಗುತ್ತಿರುವ ಮೊಬೈಲ್ ನಲ್ಲಿ ಆ ಹುಡುಗಿ  ಚಾಟಿಂಗ್ ಮಾಡುತ್ತಿರುತ್ತಾಳೆ, ನಂತರ ಆ ಮೊಬೈಲ್ ಗೆ ಕರೆ ಬರುತ್ತದೆ. ಆಗ ಎದುರಿಗಿರುವ ವ್ಯಕ್ತಿಯು (ಆ ಹುಡುಗಿಯ ತಾತಾ ಇರಬಹುದು), `ಮೊಬೈಲ್ ಚಾರ್ಜ್  ಆಗುವಾಗ ಮಾತನಾಡಬೇಡ’ ಎಂದು ಎರಡು ಮೂರು ಬಾರಿ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸುವ ಹುಡುಗಿ ತನ್ನ ಮಾತುಕತೆಯನ್ನು ಮುಂದುವರಿಸುತ್ತಾಳೆ. ನಂತರ ಆ ಹುಡುಗಿಯ ತಾಯಿಯು ಕೂಡ ಕಿವಿಮಾತು ಹೇಳುತ್ತಾಳೆ. ಆದರೆ ಆ ಹುಡುಗಿ ತನ್ನ ತಾಯಿಯ ಮಾತನ್ನು ನಿರ್ಲಕ್ಷಿಸುತ್ತಾಳೆ. ಆಕೆ  ಸಂಭಾ‍ಷಣೆಯನ್ನು ಮುಂದುವರೆಸುತ್ತಾಳೆ. ಆಗ ಮೊಬೈಲ್ ಸಿಡಿದು ಆಕೆ ಗಾಯಗೊಳ್ಳುತ್ತಾಳೆ, ತಕ್ಷಣ ಅವಳನ್ನು ಆರೈಕೆ ಮಾಡುತ್ತಾರೆ.

ಫ್ಯಾಕ್ಟ್ ಚೆಕ್

ಈ ವಿಡಿಯೋ ಒಂದು ಸ್ಕ್ರಿಪ್ಟೆಡ್ (ನಾಟಕೀಯ) ಆಗಿದ್ದು , ನಿಜವಾಗಿ ನಡೆದಿರುವ ಘಟನೆ ಆಗಿರುವುದಿಲ್ಲ. ಮೊಬೈಲ್ ಚಾರ್ಜ್ ಆಗುವಾಗ ಕರೆ ಸ್ವೀಕರಿಸಿದರೆ ಮೊಬೈಲ್ ಸ್ಪೋಟಗೊಂಡು ಹಾನಿಯಾಗಬಹುದು ಎಂದು ಪ್ರತಿ ಮೊಬೈಲ್ ಕಂಪನಿಗಳು ತಮ್ಮ ಜಾಹಿರಾತಿನಲ್ಲೇ ಹಾಕಿರುತ್ತವೆ.  ಈ ಸದರಿ ವಿಡಿಯೊ ಕೂಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡಲಾಗಿದೆ. ವಿಡಿಯೋದ ಕೊನೆಯಲ್ಲಿ, “ಜನರನ್ನು ಹೆಚ್ಚು ಜಾಗೃತಗೊಳಿಸವ ಸದುದ್ದೇಶದಿಂದ ಈ ವಿಡಿಯೋವನ್ನು ಮಾಡಲಾಗಿದ್ದು ಇದು ನಿಜವಾಗಿ ನಡೆದಿರುವ  ಘಟನೆಯಲ್ಲ” ಎಂದು ತಿಳಿಸಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

ಆದರೆ ಇದನ್ನು ಸತ್ಯ ಘಟನೆ ಎಂಬಂತೆ ಬಿಂಬಿಸಿ ವೈರಲ್ ಮಾಡುತ್ತಿದ್ದಾರೆ. ಇಂತಹ ನಾಟಕೀಯ ವಿಡಿಯೊಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ. ಜನರು ಇವು ನಿಜವಾದ ಘಟನೆಯ ವಿಡಿಯೊಗಳೆಂದೇ ಭಾವಿಸುತ್ತಿದ್ದಾರೆ.

ಜನಸಾಮಾನ್ಯರು ಇಂತಹ ವಿಡಿಯೋಗಳನ್ನು ನೋಡಿ ನಿಜವಾಗಿಯೂ ಹೀಗೆ ನಡೆದಿದೆ ಎಂದು ನಂಬುವ ಸಾಧ್ಯತೆ ಇರುತ್ತದೆ . ಹಾಗಾಗಿ ಇಂತಹ ಸ್ಕ್ರಿಪ್ಟೆಡ್  ವೀಡಿಯೋಗಳು ಕೆಲವೊಮ್ಮ ಸ್ಪಷ್ಟತೆಗಳಿಲ್ಲದೆ ಜನರನ್ನು ತಪ್ಪುದಾರಿಗೆಳೆಯುವ, ತಪ್ಪು ಮಾಹಿತಿ ನೀಡುವ ಸಾಧ್ಯತೆ ಇರುತ್ತದೆ. ಇಂಥವುಗಳನ್ನು ನಂಬುವ ಮುನ್ನ ಎಚ್ಚರವಿರಲಿ.


ಇದನ್ನು ಓದಿರಿ: Fact check: ಒಣ ಶುಂಠಿಯಿಂದ ಓಮಿಕ್ರಾನ್ ಸೋಂಕು ತಡೆಗಟ್ಟಬಹುದು ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights