ಭಾರತೀಯ ರಕ್ಷಣಾ ಸಚಿವರಿಗೆ ರಾಹುಲ್‌ಗಾಂಧಿಯ 05 ಪ್ರಶ್ನೆಗಳು!
ಭಾರತ ಮತ್ತು ಚೀನಾ ನಡುವೆ ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಟ್ವೀಟ್ ಮಾಡಿ “ಗಾಲ್ವಾನ್‌ನಲ್ಲಿನ ಸೈನಿಕರ ನಷ್ಟವು ತುಂಬಾ ಕಳವಳಕಾರಿ ಮತ್ತು ನೋವಿನ ಸಂಗತಿಯಾಗಿದೆ. ನಮ್ಮ ಸೈನಿಕರು ಕರ್ತವ್ಯದ ಸಾಲಿನಲ್ಲಿ ಅನುಕರಣೀಯ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು” ಎಂದಿದ್ದರು. ಇದಕ್ಕೆ ಉತ್ತರಿಸಿರುವ ರಾಹುಲ್ ಗಾಂಧಿ ಅದು ತುಂಬಾ ನೋವಿನಿಂದ ಕೂಡಿದ್ದರೆ:
1. ನಿಮ್ಮ ಟ್ವೀಟ್‌ನಲ್ಲಿ ಚೀನಾ ಹೆಸರಿಸದೆ ಭಾರತೀಯ ಸೇನೆಯನ್ನು ಏಕೆ ಅವಮಾನಿಸುತ್ತೀರಿ?
2. ಸಂತಾಪ ಸೂಚಿಸಲು 2 ದಿನಗಳನ್ನು ಏಕೆ ತೆಗೆದುಕೊಳ್ಳಬೇಕು?
3. ಸೈನಿಕರು ಹುತಾತ್ಮರಾಗುತ್ತಿದ್ದರೂ ರ್‍ಯಾಲಿಗಳನ್ನು ಏಕೆ ನಡೆಸುತ್ತಿದ್ದೀರಿ?
4. ಕ್ರೋನಿ ಮಾಧ್ಯಮಗಳು ಸೈನ್ಯವನ್ನು ದೂಷಿಸುತ್ತಿರುವಾಗ ಏಕೆ ಅವಿತುಕೊಂಡಿದ್ದೀರಿ?
5. ಭಾರತ ಸರ್ಕಾರದ ಬದಲಿಗೆ ಪೇಯ್ಡ್ ಮಾಧ್ಯಮಗಳು ಸೈನ್ಯವನ್ನು ದೂಷಿಸುವುದು ಏಕೆ?
ಎಂದು ರಾಹುಲ್ ರಕ್ಷಣಾ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
https://twitter.com/RahulGandhi/status/1273218580234924032