ಮಕ್ಕಳನ್ನು ವಿದೇಶಕ್ಕೆ ಕೆಲಸ ಮಾಡಲು ಕಳಿಸುವ ಪೋಷಕರೇ ಒಂದು ಕ್ಷಣ ಈ ಸ್ಟೋರಿ ನೋಡಿ….

ಮಕ್ಕಳನ್ನು ವಿದೇಶಕ್ಕೆ ಕೆಲಸ ಮಾಡಲು ಕಳಿಸುವ ಪೋಷಕರೇ ಒಂದು ಕ್ಷಣ ಈ ಸ್ಟೋರಿಯನ್ನೊಮ್ಮೆ ನೋಡಿ. ವಿದೇಶದಲ್ಲಿ ಕೆಲಸ ಮಾಡಲು ಹೋದ ಇಬ್ಬರು ಯುವಕರು ಪೋಷಕರ ಸಂಪರ್ಕಕ್ಕೂ ಸಿಗದೇ, ವೀಸಾ ಮೂಗಿದು ಸಧ್ಯ ವಾಪಸ್ ದೇಶಕ್ಕೆ ಮರಳಿ ಬರದಂತಾಗಿದ್ದಾ ಕಂಗಾಲಾಗಿದ್ದಾರೆ ಯುವಕರು.

ಹೌದು ಮೂಲತಃ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಮತ್ತು ನರೆಂದ್ರ ಗ್ರಾಮದ ಇಬ್ಬರು ಯುವಕರೇ ಸದ್ಯ ಅಬುದುಬೈನಲ್ಲಿ ಇಲೆಕ್ಟ್ರೀಕಲ್ ಹೆಲ್ಪರ್ ಕೆಲಸಕ್ಕೆಂದು ಎಜೇಂಟರ ಮೂಲಕ ಹೋಗಿ ಸದ್ಯ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಆಸಿಪ್ ಅಹಮ್ಮದ ಅಸ್ಕರ ಅಲಿ ಉಣಕಲ್ಲ ಮತ್ತು ಇನಾಯತ್ ಮಹಮ್ಮದರಫಿ ಜಾರಿ ಎಂಬುವ ಇಬ್ಬರು ಯುವಕರು. ಇವರು ಹುಬ್ಬಳ್ಳಿ ಮೂಲದ ಅಸರಾರ್ ಎಂಬುವ ಮದ್ಯವರ್ತಿಯ ಮೂಲಕ ದೂರದ ಅಬುದುಬೈನಲ್ಲಿ ಕೆಲಸ ಅರಸಿ ಟೂರಿಷ್ಟ್ ವೀಸಾದ ಮಲೆ ಹೋದವರು. ಸದ್ಯ ನಾಲ್ಕು ತಿಂಗಳಾದ್ರು ಕೆಲಸವು ಇಲ್ಲ ಸಂಬಳವು ಇಲ್ಲ. ಕುಟುಂಬಸ್ಥರ ಸಂಪರ್ಕಕ್ಕೂ ಸಹ ಸಿಗುತ್ತಿಲ್ಲ. ಇವರ ವೀಸಾ ಕೂಡಾ ಮೂಗಿದಿದ್ದು ಮರಳು ಬರುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ, ಇದರಿಂದ ಕಂಗಾಲಾದ ಕುಟುಂಬಸ್ಥರು ಕಣ್ಣಿರು ಹಾಕುವಂತಾಗಿದೆ.

ನಾಲ್ಕು ತಿಂಗಳ ಹಿಂದೆ ಅಬುದುಬೈನಲ್ಲಿ ಇಲೆಕ್ಟ್ರೀಕಲ್ ಹೆಲ್ಪರ್ ಕೆಲಸ ಕೊಡಿಸುವದಾಗಿ ನಂಬಿಸಿ ಮಧ್ಯವರ್ತಿ ಅಸರಾರ್ ಎನ್ನುವ ವ್ಯಕ್ತಿಯ ಮೂಲಕ ಅಬುದುಬೈಗೆ ತೆರಳಿದ್ದಾರೆ ಆದ್ರೆ ಇದುವರೆಗೆ ಕೆಲಸಕ್ಕೆಂದು ಹೋದ ಯುವಕರಿಗೆ ಕೆಲಸ ನೀಡದೇ ಒಂದೇಡೆ ಕೂರಿಸಿ ಕಿರುಕುಳ ನೀಡುತ್ತಿದ್ದಾರೆ. ಊಟ ನೀರು ಸಹ ನೀಡದೇ ನರಕಯಾತನೆ ಪಡುತ್ತಿದ್ದಾರೆ ಈ ಯುವಕರು. ಈ ಬಗ್ಗೆ ಕಳೆದ ತಿಂಗಳು ವಾಟ್ಸ್ಪ್ ಮೂಲಕ ಆಡಿಯೋ ಮೇಸೆಜ್ ಮಾಡಿದ್ದಾರೆ. ಇದರಿಂದ ಕುಟುಂಬಸ್ತರಲ್ಲಿ ಮತಷ್ಟು ಆತಂಕ ಮನೆ ಮಾಡಿದೆ. ನಮಗೆ ಹೇಗಾದ್ರು ಮಾಡಿ ನಮ್ಮ ಮಕ್ಕಳನ್ನ ವಾಪಸ್ ಕಳಿಸದ್ರೆ ಸಾಕು ಎಂದು ಯುವಕನ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಕೆಲಸಕ್ಕೆಂದು ಟೂರಿಷ್ಟ್ ವೀಸಾದ ಮೇಲೆ ಕರೆದೋಯ್ದ ಬಗ್ಗೆ ನಮಗೆ ಮಾಹಿತಿ ಇಲ್ಲ, ಎಜೇಂಟರ್ ಮಾಡಿದ ಯಡವಟ್ಟಿನಿಂದ ನಮ್ಮ ಮಕ್ಕಳು ಅಪಾಯದಲ್ಲಿದ್ದಾರೆ. ಈ ಬಗ್ಗೆ ಮಧ್ಯವರ್ತಿಗಳನ್ನ ಕೇಳಿದ್ರೆ ಸರಿಯಾಗಿ ಹೇಳುತ್ತಿಲ್ಲ, ನಿಮ್ಮ ಮಕ್ಕಳನ್ನು ನೀವೆ ಕರೆಸಿಕೊಳ್ಳಿ ಎಂದು ಹೇಳುತ್ತಿದ್ದಾರೆ ಎನ್ನುತ್ತಾರೆ ಪೋಷಕರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights