ಮಕ್ಕಳಿಗೆ ವಿಷ ಉಣಿಸಿದ ತಾಯಿ ಆತ್ಮಹತ್ಯೆಗೆ ಯತ್ನ – ಓರ್ವ ಮಗು ಸಾವು

ಕುಟುಂಬ ಕಲಹಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪುನೀತ್ (೩) ಹಾಗೂ ತಾಯಿ ಸೌಜನ್ಯ(೨೪) ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ. ಆದರೆ ಘಟನೆಯಲ್ಲಿ ಒಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಲೋಹಿತ್(೦೧)ಮೃತ ದುರ್ದೈವಿ ಮಗು.

ತಾಯಿ ಮಗು ಪುನೀತ್ ಸದ್ಯ  ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ಮಳವಳ್ಳಿ ಡಿಎಸ್ಪಿ ಕುಮಾರಿ ಪೃಥ್ವಿ ಹಾಗೂ CPI ಮಂಜುನಾಥ್ p.s.i ಚೌಡೇಗೌಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.