ಮತ್ತೆ ಮೈಸೂರು ವಿಭಜನೆಯ ಕೂಗು ಎತ್ತಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್

ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತೆ ಮೈಸೂರು ವಿಭಜನೆಯ ಕೂಗು ಎತ್ತಿದ್ದಾರೆ.

ಅಖಾಡಕ್ಕಿಳಿದ ಮೊದಲ ದಿನವೆ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ವಿಚಾರ ಪ್ರಸ್ತಾಪ‌ ಮಾಡಿದ ಅವರು, ನಾನು ಹುಣಸೂರಿನಿಂದ ಗೆದ್ದು ಮಂತ್ರಿ ಆಗ್ತಿನಿ. ಹುಣಸೂರು ತಾಲ್ಲೂಕನ್ನ ಹೊಸ ಜಿಲ್ಲೆಯಾಗಿ ಮಾಡ್ತಿನಿ. ಇದು ನನ್ನ ಶಪಥ. ನನ್ನದು ಬರಿ ಮಾತಲ್ಲ ಬರಿ ಟೀಕೆಯಲ್ಲ. ನಾನು ಕನಸುಗಾರ ಪ್ರತ್ಯೇಕ ಜಿಲ್ಲೆಯ ಕನಸನ್ನ ನನಸು ಮಾಡ್ತೇನೆ. ನಮ್ಮದೆ ಸರ್ಕಾರ ಇದೆ.

ಹುಣಸೂರು ತಾಲ್ಲೂಕಿನ್ನ ಜಿಲ್ಲೆ ಮಾಡೆ ಮಾಡ್ತಿವಿ. ಅದಕ್ಕೆ ದೇವರಾಜ ಅರಸು ಹೆಸರುಡುತ್ತೇನೆ. ಈ ಮಾತು ಚುನಾವಣೆಗೆ ಸೀಮಿತ ಅಲ್ಲ. ಫಲಿತಾಂಶ ನಂತರದ ಮರುದಿನದಿಂದಲೇ ಈ ಪ್ರಕ್ರಿಯೇ ಶುರು ಮಾಡ್ತಿನಿ ಎಂದು ವಿಶ್ವನಾಥ್ ಸಪತ ಮಾಡಿದ್ದಾರೆ.

ಹುಣಸೂರಿಗೆ ಕೆಟ್ಟ ಹೆಸರು ತಂದಿದ್ದು ನಾನೋ ಕೈ ಅಭ್ಯರ್ಥಿ ಮಂಜುನಾಥ ಅನ್ನೋದು ಜನಕ್ಕೆ‌ ಗೊತ್ತಿದೆ. 10 ವರ್ಷದಲ್ಲಿ ಮಂಜುನಾಥ್ ಮಾಡಿದ ಅವಾಂತರ ಒಂದೋ ಎರಡೋ. ಹಣ ಹೆಂಡ ಹಂಚಿ ನಾನು ರಾಜಕಾರಣ ಮಾಡ್ತಿಲ್ಲ. ಅವರು ಯಾವ ರೀತಿ ರಾಜಕಾರಣ ಮಾಡ್ತಿದ್ದಾರೆ ಅನ್ನೋದು ಗೊತ್ತಿದೆ. ಎದುರಾಳಿ ವಿರುದ್ದ ಮಾತನಾಡಲು ತೂಕವಾಗಿ ಮಾತನಾಡಲಿ. ಅಭಿವೃದ್ಧಿ ವಿಚಾರದಲ್ಲಿ ನಾನು ಕಾಣುವ ಕನಸನ್ನಾದರೂ ಕಾಣುವ ಶಕ್ತಿ ಮಂಜುನಾಥ್ ಇದೇಯಾ. ವಿರೋಧ ಪಕ್ಷಗಳು ನಮ್ಮನ್ನ ಏನಾದರೂ ಕರೆಯಲಿ. ನಾನು ನನ್ನದೆ ಮುಖ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights