ಮಧ್ಯರಾತ್ರಿ ಆರಾಧ್ಯ ದೈವನ ಸೂಪರ್ ಸ್ಟಾರ್ ಹುಟ್ಟುಹಬ್ಬ ಆಚರಿಸಿದ ವಿಜಿ ಸಲಗ ಟೀಮ್

ಸೂಪರ್ ಸ್ಟಾರ್ ರಜಿನಿಕಾಂತ್ ಸೂಪರ್ ಸ್ಟಾರಿಗಳಿಗೆಲ್ಲಾ ರೋಲ್ ಮಾಡೆಲ್. ಸ್ಟೈಲ್ ಗೆ, ಸರಳತೆಗೆ , ಸ್ಫೂರ್ತಿಗೆ, ಸ್ಟಾರಿಸಂಗೆ ಮತ್ತೊಂದು ಹೆಸ್ರೇ ಸೂಪರ್ ಸ್ಟಾರ್ ತಲೈವರ್ ರಜಿನಿಕಾಂತ್.

ಇಂತಹ ಕನ್ನಡ ನಾಡಲ್ಲಿ ಹುಟ್ಟಿ ಬೆಳೆದು ಕನ್ನಡಿಗನಾಗಿ ಕಲಾವಿದನಾಗಿ ಜಗತ್ತಿಗೆ ಮಾದರಿಯಾದ, ಜಗತ್ತಿಗೆ ಸೂಪರ್ ಸ್ಟಾರ್ ಆದ ಶಿವಾಜಿ ಗಾಯ್ಕವಾಡ್ ಅಲಿಯಾಸ್ ರಜಿನಿಕಾಂತ್ ಗೆ ಇವತ್ತು ಹುಟ್ಚುಹಬ್ಬದ ಸಂಭ್ರಮ, ಹೌದು 70ನೇ ವಸಂತಕ್ಕೆ ಕಾಲಿಟ್ಟಿರೋ ಈ ಚಿರ ಯುವಕ ಸ್ಟೈಲ್ ಕಿಂಗ್ ರಜಿನಿಕಾಂತ್ ಹುಟ್ಟುಹಬ್ಬವನ್ನ ಸ್ಟಾರ್ ಫ್ಯಾನ್ ದುನಿಯಾ ವಿಜಯ್ ಅವರ ಸಮ್ಮುಖದಲ್ಲಿ ಕೆ.ಆರ್ ಮಾರುಕಟ್ಟೆ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿಮಾನಿಗಳ ಸಂಘದವರು ಸಲಗ ಟೀಮ್ ಜೊತೆ ಮಧ್ಯರಾತ್ರಿ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

ತಲೈವರ್ ರಜಿನಿಕಾಂತ್ ರನ್ನ ಸ್ಫೂರ್ತಿಯನ್ನಾಗಿಸಿಕೊಂಡೇ ಚಿತ್ರರಂಗಕ್ಕೆ ಬಂದವರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು, ದುನಿಯಾ ಚಿತ್ರ ಬಂದಾಗ ಸೂಪರ್ ಸ್ಟಾರ್ ವಿಜಿಯವರನ್ನ ಕರೆಸಿಕೊಂಡು ಬೆನ್ನು ತಟ್ಟಿದ್ದರು. ಸೂಪರ್ ಸ್ಟಾರ್ ರಜಿನಿಕಾಂತ್ ಅಂದ್ರೆ, ಇಂದಿಗೂ ಅದೇ ಅಭಿಮಾನ ಅದೇ ಪ್ರೀತಿಯನ್ನಿಟ್ಟುಕೊಂಡು ಸಾಯೋವರೆಗೂ ಅವ್ರನೇ ನನಗೆ ಸ್ಫೂರ್ತಿ ಅನ್ನೋ ದುನಿಯಾ ವಿಜಯ್. ಸಲಗ ಚಿತ್ರದೊಂದಿಗೆ ಡೈರೆಕ್ಟರ್ ಆಗಿ ಗೆಲ್ಲೋದ್ರೊಂದಿಗೆ, ಹೀರೋ ಆಗಿ ಸ್ಟ್ರಾಂಗ್ ಕಂಬ್ಯಾಕ್ ಮಾಡೋ ಭರವಸೆಯಲ್ಲಿದ್ದಾರೆ. ಈಗಾಗ್ಲೇ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋದಕ್ಕೆ ಎಲ್ಲಾ ತಯಾರಿ ನಡೆಸಿಕೊಂಡಿರೋ ಸಲಗ ಚಿತ್ರತಂಡ ಇದೇ 18ನೇ ತಾರೀಖು ಗ್ರ್ಯಾಂಡ್ ಆಗಿ ಮೇಕಿಂಗ್ ವಿಡಿಯೋನ ರಿಲೀಸ್ ಮಾಡ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights