ಮರುಮದುವೆಯಾಗಲು ಬಯಸಿ ಪತ್ನಿಯನ್ನು ಕೊಲ್ಲಲು ಹಾವುಗಳನ್ನು ಖರೀದಿಸಿದ ಪತಿ!
ಹಾವಿನ ಕಡಿತದಿಂದ ಪತ್ನಿ ಸಾವಿಗೆ ಸಂಬಂಧಿಸಿದಂತೆ ಪತಿಯನ್ನು ಬಂಧಿಸಿದ ರಾಜ್ಯ ಪೊಲೀಸರಿಗೆ ಆಘಾತಕಾರಿ ವಿಚಾರ ಲಭ್ಯವಾಗಿದೆ.
ಮರುಮದುವೆಯಾಗಲು ಬಯಸಿದ್ದ ಪತಿರಾಯ ತನ್ನ ಹೆಂಡತಿಯನ್ನು ಕೊಲ್ಲಲು ಹಾವನ್ನು ಖರೀದಿಸಿದ ಆಘಾತಕಾರಿ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ, ಪತಿ ಸೂರಜ್ ತನ್ನ ಹೆಂಡತಿ ಉತ್ರಾಳನ್ನು ಕೊಲ್ಲಲು ಹಾವುಗಳನ್ನು ಬಳಸಿದ್ದಾನೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.
ಮೇ 7 ರಂದು ಅಂಚಲ್‌ನಲ್ಲಿರುವ ಆಕೆಯ ಮನೆಯಲ್ಲಿ ಉತ್ರಾ ಶವವಾಗಿ ಪತ್ತೆಯಾಗಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಹಾವಿನ ಕಡಿತವೇ ಉತ್ರಾ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಆದರೆ, ಉತ್ರಾ ಅವರ ಕುಟುಂಬವು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
ಪೊಲೀಸರ ಪ್ರಕಾರ, ಫೆಬ್ರವರಿಯಲ್ಲಿ ಸೂರಜ್ ತನ್ನ ಹೆಂಡತಿಯನ್ನು ಕೊಲ್ಲುವ ಮೊದಲ ಪ್ರಯತ್ನವನ್ನು ರೂಪಿಸಿದ. ಅವನು ತನ್ನ ಸ್ನೇಹಿತ ಸುರೇಶ್ ಸಹಾಯದಿಂದ ಪ್ಲಾನ್ ಮಾಡಿದ್ದಾನೆ. ಪ್ಲಾನ್ ಪ್ರಕಾರ ಹಾವು ಉತ್ರಾಳನ್ನು ಕಚ್ಚಿದೆ. ಉತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾದೆ. ಒಂದು ತಿಂಗಳಿಗಿಂತ ಹೆಚ್ಚು ಚಿಕಿತ್ಸೆಯ ನಂತರ ಉತ್ರಾಳನ್ನು ಬಿಡುಗಡೆ ಮಾಡಲಾಯಿತು. ಅವಳು ಅಂಚಲ್‌ನಲ್ಲಿರುವ ತನ್ನ ಹೆತ್ತವರ ಮನೆಗೆ ತೆರಳಿದ್ದಾಳೆ.
ಮೊದಲ ಪ್ರಯತ್ನ ವಿಫಲವಾದ ನಂತರ, ಸೂರಜ್ ಏಪ್ರಿಲ್ನಲ್ಲಿ ತನ್ನ ಸ್ನೇಹಿತ ಸುರೇಶನಿಂದ ನಾಗರಹಾವನ್ನು ಖರೀದಿಸಿದ. ಮೇ 6 ರಂದು ಸೂರಜ್ ರಾತ್ರಿಯಲ್ಲಿ ಹಾವನ್ನು ಹೊರಗೆ ತೆಗೆದುಕೊಂಡು ಅದನ್ನು ಉತ್ರಾ ದೇಹದ ಮೇಲೆ ಇಟ್ಟಿದ್ದಾನೆ. ಅವನು ಹಾಸಿಗೆಯಲ್ಲಿ ಕುಳಿತು ಹಾವು ಉತ್ರಾವನ್ನು ಎರಡು ಬಾರಿ ಕಚ್ಚುವುದನ್ನು ನೋಡಿದ್ದಾನೆ. ನಂತರ ಮರುದಿನ ಬೆಳಿಗ್ಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದು ಸೂರಜ್ ಅಪರಾಧದ ಹಿಂದಿನ ನಿಜವಾದ ಉದ್ದೇಶ ಎಂದು ಪೊಲೀಸರು ತಿಳಿದಿದ್ದು, ಸೂರಜ್ ವರದಕ್ಷಿಣೆ ರೂಪದಲ್ಲಿ ಅಪಾರ ಪ್ರಮಾಣದ ಹಣ ಮತ್ತು ಚಿನ್ನವನ್ನು ಪಡೆದಿದ್ದರೂ, ಅವನಿಗೆ ಉತ್ರಾ ತೃಪ್ತಿ ಇರಲಿಲ್ಲ ಎನ್ನುವ ವಿಚಾರ ತನಿಖೆಯಿಂದ ಬಯಲಾಗಿದೆ.