ಮಲಗುವ ಮುನ್ನ ತಲೆಯ ಸ್ನಾನ ಮಾಡುವುದು ಒಳ್ಳೆಯದೇ…? : ಈ ಬಗ್ಗೆ ನಿಮಗೆಷ್ಟು ಗೊತ್ತು?

ಮಲಗುವ ಮುನ್ನ ತಲೆಯ ಸ್ನಾನ ಮಾಡುವುದು ಒಳ್ಳೆಯದೇ.. ? ಇದರಿಂದ ಕೂದಲೆ ಮೇಲಾಗುವ ಅಡ್ಡ ಪರಿಣಾಮಗಳೇನು…? ಇಂಥೆಲ್ಲಾ ಪ್ರಶ್ನೆಗಳು ನಿಮಗೆ ಹುಟ್ಟಿದೆಯೋ.? ಇಲ್ವೋ..? ಗೊತ್ತಿಲ್ಲ. ಒಂದು ವೇಳೆ ಹುಟ್ಟಿದ್ದರೂ ಕೂಡ ಇದಕ್ಕೆ ಉತ್ತರ ಸಿಗದೇ ಇದ್ದಿರಬಹುದು. ಇದಕ್ಕೆ ಉತ್ತರ ನಾವು ಕೊಡ್ತೀವಿ ನೋಡಿ.

ಕೂದಲು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಇದರ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಕಡಿಮೆಯೇ.. ಆದರೆ ಕೆಲವೊಂದು ಬಾರಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಇಲ್ಲ. ತಲೆ ಸ್ನಾನ ಮಾಡಿ ಮಗಲಬಹುದೇ..? ಹೀಗೆಂದು ಕೇಳಿದ್ರೆ ಖಂಡಿತವಾಗಿಯೂ ನೀವು ಈ ರೀತಿಯಾದ ತಪ್ಪು ಮಾಡಬೇಡಿ. ಹೀಗೆ ಮಾಡುವುದರಿಂದ ಆಗುವ ಕೂದಲ ಸಮಸ್ಯೆಗಳ ಬಗ್ಗೆ ಈ ಕೆಳಕಂಡಂತೆ ತಿಳಿದುಕೊಳ್ಳಬಹುದು.

ಕೂದಲು ಗಂಟಾಗುವುದು :- ಸಾಮಾನ್ಯವಾಗಿ ಒಣ ಕೂದಲು ಗಂಟಾಗುವುದು ಹೆಚ್ಚು. ಆದರೆ ಹಸಿ ಕೂದಲು ಒಣಕೂದಲಿಗಿಂತ ಅಧಿಕವಾಗಿ ಗಂಟಾಗುತ್ತದೆ.  ಇದರಿಂದ ರಾತ್ರಿ ಸ್ನಾನ ಮಾಡಿದರೆ ಇನ್ನಷ್ಟು ಗಂಟಾಗಿ ಕೂದಲುದುರುವ ಸಾಧ್ಯತೆ ಇರುತ್ತದೆ.

ಕೂದಲು ಉದರುವುದು :- ಒದ್ದೆ ಅಂಶ ಇದ್ದರೆ ತಲೆಒಟ್ಟು ಅಧೀಕವಾಗುತ್ತದೆ. ಒಣಗದೇ ಇದ್ದರೆ ವಾಸನೇ ಕೂಡ ಬರಬಹುದು. ಇದರಿಂದ ಕೂದಲು ಉದರುವ ಸಾಧ್ಯತೆ ಇರುತ್ತದೆ.

ಆಕರ್ಷಕವಾಗಿ ಕಾಣುವುದಿಲ್ಲ. :-  ಕೂದಲು ಆಕರ್ಷಕವಾಗಿ ಕಾಣಬೇಕು ಅಂದ್ರೆ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಇಂದು ವೇಳೆ ಕೂದಲು ಚೆನ್ನಾಗಿ ಒಣಗದೇ ಹೋದರೆ ತನ್ನ ಹೊಳಪನ್ನು ಕ್ರಮೇಣ ಕಳೆದುಕೊಳ್ಳುತ್ತದೆ. ಹೀಗಾಗಿ ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳುವುದು ಒಳಿತು.

ಶಿಲೀಂದ್ರ ಸೋಂಕು ಉಂಟಾಗುವ ಸಾಧ್ಯತೆ :- ಕೂದಲು ಒಣಗದೇ ಹೋದರೆ ಇಚ್ಚಿಂಗ್, ತಲೆ ಹೊಟ್ಟು ಹೆಚ್ಚಾಗುತ್ತದೆ. ಹಾಗಂತ ಕೂದಲು ಬೇಗ ಒಣಗಲು ಹೇರ್ ಡ್ರೈಯರ್ ಬಳಕೆ ಮಾಡಬೇಡಿ. ಇದರಿಂದ ಶಿಲೀಂದ್ರ ಸೋಂಕು ಸಮಸ್ಯೆ ಹೆಚ್ಚಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights