ಮಲೆನಾಡು ಭಾಗದಲ್ಲಿ ಭಾರೀ ಮಳೆ : 20 ಅಡಿ ಎತ್ತರದಿಂದ ರಸ್ತೆಗೆ ಉರುಳಿದ ಬಂಡೆ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ವರುಣನಿಂದ ಜನ ತತ್ತಿರಿಸಿ ಹೋಗಿದ್ದಾರೆ.
ಸಕಲೇಶಪುರ-ಆಲೂರು ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸಕಲೇಶಪುರ ತಾಲ್ಲೂಕಿನ ವಿವಿಧೆಡೆ ಮನೆಗಳು ಕುಸಿದು ಬೀಳುವ ಆತಂಕ ಶುರುವಾಗಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ.
ಮಾರನಹಳ್ಳಿ ಸಮೀಪ ರಸ್ತೆ ಪಕ್ಕಕ್ಕೆ 20 ಅಡಿ ಎತ್ತರದಿಂದ ಉರುಳಿದ ಬಂಡೆ ಕಂಡು ಜನ ಭಯಭೀತಿಗೊಂಡಿದ್ದಾರೆ.
ಮಂಗಳೂರು-ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳ ಸಂಚಾರ ಮಾಡುತ್ತವೆ. ಈ ರಸ್ತೆಯಲ್ಲಿ ಬಂಡೆ ರಸ್ತೆಗೆ ಉರುಳುವ ಸಾಧ್ಯತೆ ಇದೆ. ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಜನ ಭಯಭೀತಿ ಗೊಂಡಿದ್ದಾರೆ.
ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳ ಪರದಾಟ ಪಡುವಂತಾಗಿದೆ. ಹೇಮಾವತಿ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. 20 ಸಾವಿರ ಕ್ಯೂಸೆಕ್ ಗೂ ಒಳ ಹರಿವು ಅಧಿಕ ಪ್ರಮಾಣವಾಗಿದೆ. 18,650 ಕ್ಯೂಸೆಕ್ ನೀರು ಡ್ಯಾಂ ನಿಂದ ಹೊರಕ್ಕೆ ಬಿಡಲಾಗಿದೆ.