ಮಹಾರಾಷ್ಟ್ರ ಸರ್ಕಾರ ವಿರುದ್ದ ಶಿವಸೇನಾ ಮೈತ್ರಿಕೂಟದ ಮೇಲ್ಮನವಿ ವಿಚಾರಣೆ ನಾಳೆಗೆ ಮುಂದೂಡಿಕೆ…
ಆತ್ಯಾತುರವಾಗಿ ಗಡಿಬಿಡಿಯಲ್ಲಿ ರಚಿಸಲ್ಪಟ್ಟ ಮಹಾರಾಷ್ಟ್ರ ಸರ್ಕಾರ ವಿರುದ್ದ ಶಿವಸೇನಾ ಮೈತ್ರಿಕೂಟ ಸಲ್ಲಿಸಿರುವ ಮೇಲ್ಮನವಿ ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಒಳಗಾದ ನಂತರ ನ್ಯಾಯಾಧೀಶರು ತಮ್ಮ ತೀರ್ಪನ್ನು ನಾಳೆಗೆ ಮುಂದೂಡಿದ್ದಾರೆ.
ಸದ್ಯ ಮಹಾರಾಷ್ಟ್ರದಲ್ಲಿರುವ ಸರ್ಕಾರ ಅಸಾಂವಿಧಾನಿಕವಾಗಿದ್ದು,ಕಾಣದ ಕೈಗಳ ಅಧಿಕಾರ ದುರುಪಯೋಗದಿಂದ, ಮೋಸದಿಂದ ಏರ್ಪಟ್ಟಿದೆ ಎಂದು ಆರೋಪಿಸಿ ಎನ್‌ಸಿಪಿ-ಕಾಂಗ್ರೆಸ್-ಶಿವಸೇನಾ ಪಕ್ಷಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಅದರಂತೆ ನಿನ್ನೆ ಸುಧೀರ್ಘ ನಡೆಸಿದ ಸುಪ್ರೀಂಕೋರ್ಟ್, ಇಂದಿಗೆ ವಿಚಾರಣೆ ಮುಂದೂಡಿತ್ತು. ಜೊತೆಗೆ ನ್ಯಾಯಪೀಠವು ಸರ್ಕಾರ ರಚನೆಗೆ ಆಧಾರವಾಗಿದ್ದ ಶಾಸಕರ ಸಹಿಯುಳ್ಳ ಬೆಂಬಲ ಪತ್ರ, ಸೇರಿ ಇನ್ನೂ ಕೆಲವು ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ಕೋರಿತ್ತು.
ಇಂದು ಸುಪ್ರೀಂಕೋರ್ಟ್‌ನಲ್ಲಿ 10: 30ಕ್ಕೆ ವಿಚಾರಣೆ ಆರಂಭವಾದಾಗ ವಾದ ಪ್ರತಿವಾದ ಸಾಕ್ಷಿಗಳ ಪರಿಶೀಲನೆ ನಡೆದ ಬಳಿಕ ಎಲ್ಲರು ಎಣಿಸಿದಂತೆ ಇಂದು ಮಹಾರಾಷ್ಟ್ರದ ತೀರ್ಪು ಬರಬೇಕಿತ್ತು ಆದರೆ ತೀರ್ಪನ್ನು ನಾಳೆ ಬೆಳ್ಳಿಗೆ 10:30ಕ್ಕೆ ಕಾಯ್ದಿರಿಸಿದೆ ಎಂದು ನ್ಯಾ.ರಮಣ ನೇತೃತ್ವದ ಪೀಠ ತಿಳಿಸಿದೆ.