ಮಾಡಲಿಂಗ್ ಮೂಲಕ ದೇಶದ ಗಮನ ಸೆಳೆದ ಬಿಸಿಲು ನಾಡ ಬಾಲಕಿ…
ಊರು ಯಾವುದಾದರೇನು..? ಜನ ಹೇಗಿದ್ದರೇನು..? ವಯಸ್ಸು ಎಷ್ಟಾದರೇನು..? ಮಾಡುವ ಛಲ ಒಂದಿದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನ ಸಲೀಸಾಗಿ ಸಾಧಿಸಬಹುದು ಅನ್ನೋದಕ್ಕೆ ಬಿಸಿಲು ನಾಡು ಕಲಬುರಗಿಯ ಬಾಲಕಿ ಬೆಸ್ಟ ಎಕ್ಸಾಂಪಲ್.
ಹೌದು… ಹೈದರಾಬಾದ್ನ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅನನ್ಯ 9ನೇ ತರಗತಿಯ ಬಿಸಿಲು ನಾಡು ಕಲಬುರಗಿಯ ಬಾಲಕಿ ಮಾಡಲಿಂಗ್ ಮೂಲಕ ದೇಶದ ಗಮನ ಸೆಳೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಏಪ್ರಿಲ್ 27ರಿಂದ 29ರವರೆಗೆ ಕೇರಳದ ಕ್ಯಾಲಿಕಟ್ನಲ್ಲಿ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನ್ಯನ ಪ್ರದರ್ಶನ ನೀಡಿ ಹಾಂಕಾಂಗ್ನಲ್ಲಿ ನಡೆದ ಸ್ಪರ್ಧಕ್ಕೆ ಆಯ್ಕೆ ಆಗಿದ್ದಳು. ಹಾಂಕಾಂಗ್ನಲ್ಲಿ ಇತ್ತೀಚೆಗೆ ನಡೆದ ಜೂನಿಯರ್ ಇಂಟರ್ ನ್ಯಾಷನಲ್ ಮಾಡೆಲ್ ಸ್ಪರ್ಧೆಯಲ್ಲಿ, ಕಲಬುರಗಿಯ ಅನನ್ಯ ರೈ ಚಿನ್ನದ ಪದಕ ಗಳಿಸಿದ್ದಾಳೆ.
ಭಾರತದ ಪರ ಜೂನಿಯರ್ ಮಾಡೆಲಿಂಗ್ನಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಿಂದ ಆಯ್ಕೆಯಾದ ಮಾಡೆಲ್ ಅನನ್ಯ ಆಗಿದ್ದಾಳೆ. ದೇಶದಲ್ಲಿ ಮಿಂಚಿದ್ದ ಅನನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭೆಯನ್ನು ಅನಾವರಣಗೊಳಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.
ಅನನ್ಯ ತಮ್ಮ ತಂದೆ-ತಾಯಿಯ ಏಕೈಕ ಪುತ್ರಿ. ಅನನ್ಯಳ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ರೂಪಾಕ್ಷಿ ಅವರು ಕಲಬುರಗಿಯ ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನನ್ಯ ಹೈದರಾಬಾದ್ನ ನರ್ಸರಿ ಶಾಲೆಯಲ್ಲಿ ಕ್ಯಾಟ್ವಾಕ್ ಮಾಡಿ ಬಹುಮಾನ ಗೆದಿದ್ದಳು. ಬಳಿಕ ಅನನ್ಯ ಮಾಡೆಲ್ ಆಗಬೇಕೆಂಬ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಅನನ್ಯ ತಾಯಿ ಸುಮಿತ್ರ ರೈ ಅವರು ತಮ್ಮ ಮಗಳ ಡಯಟ್ ಬಗ್ಗೆ ನಿರ್ಧರಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯವನ್ನು ನೋಡಿಕೊಳ್ಳುವ ಸಲುವಾಗಿ ಅನನ್ಯ ಜಂಕ್ ಫುಡ್ ತಿನ್ನುವುದಿಲ್ಲ. ಸದ್ಯ ಅನನ್ಯ ಈಗ ಲೀ ಬ್ರಾಂಡ್ ಜೀನ್ಸ್ ಹಾಗೂ ಅರುಣ್ ಐಸ್ಕ್ರೀಂ ಜಾಹೀರಾತಿಗೆ ಆಯ್ಕೆ ಆಗಿದ್ದಾಳೆ.