ಮಾಸ್ಕ್ ಧರಿಸದಿದ್ರೆ ದಂಡ ಕಡ್ಡಾಯ! : ಕೊರೊನಾ ತಡೆಗೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ

ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಇದಕ್ಕೆ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಇನ್ನೇನು ಲಾಕ್ ಡೌನ್ ಮುಕ್ತಾಯಗೊಳ್ಳುವುದಕ್ಕೆ ಇನ್ನೂ 2ದಿನಗಳು ಬಾಕಿ ಇವೆ. ಹಾಗಂತ ಲಾಕ್ ಡೌನ್ ಸಡಿಲಗೊಂಡು ಎಥಾಸ್ಥಿತಿಗೆ ಎಲ್ಲರೂ ಬಂದುಬಿಡ್ತಾರೆ ಎಂದು ಭಾವಿಸಲಾಗದು. ಯಾಕಂದ್ರೆ ಕೊರೊನಾ ಸೊಂಕಿತರ ಸಂಖ್ಯೆ ಲಾಕ್ ಡೌನ್ ನಡುವೆಯೂ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದೆ. ಇದಕ್ಕೆ ಕಾರಣ ಸರ್ಕಾರ ಅದೆಷ್ಟೇ ಮುಜಾಗೃತ ಕ್ರಮಗಳನ್ನು ಕೈಗೊಂಡರೂ ಜನ ಪಾಲಿಸದೇ ಇರುವುದು. ಹೀಗಾಗಿ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ. ಇಂದಿನಿಂದ ಮಾಸ್ಕ್ ಧರಿಸದೇ ಹೊರಪ್ರವೇಶಿಸಿದರೆ ದಂಡ ಕಟ್ಟುವ ನಿಯಮವನ್ನು ಜಾರಿಗೆ ತರಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, “ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 1 ಸಾವಿರ ರೂಪಾಯಿ ದಂಡ. ಎರಡನೇ ಬಾರಿ ಉಲ್ಲಂಘಿಸಿದರೆ 2 ಸಾವಿರ ರೂಪಾಯಿ ದಂಡ. ಪದೇ ಪದೇ ಉಲ್ಲಂಘಿಸಿದರೆ ಶಿಕ್ಷೆ  ವಿಧಿಸಲು ಚಿಂತನೆ ನಡೆಸಲಾಗಿದೆ,” ಎಂದು ತಿಳಿಸಿದ್ದಾರೆ.

“ಈಗಾಗಲೇ ದಂಡ ವಿಧಿಸುವ ಹೊಣೆಗಾರಿಕೆ ಮಾರ್ಷಲ್​​ಗಳಿಗೆ ವಿಧಿಸಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ,” ಎಂದು ಅವರು ತಿಳಿಸಿದರು.ಕೊರೋನಾ ಸೋಂಕಿತ ವ್ಯಕ್ತಿ ಸೀನಿದಾಗ ವೈರಸ್​ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ಮಾಸ್ಕ್​ ಧರಿಸಿದರೆ ಒಂದೊಮ್ಮೆ ಕೊರೋನಾ ವೈರಸ್​ ಅಂಟಿರುವ ವ್ಯಕ್ತಿ ಸೀನಿದರೂ ವೈರಸ್​ ವಾತಾವರಣ ಸೇರುವು ಸಾಧ್ಯತೆ ತುಂಬಾನೇ ಕಡಿಮೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಈ ರೀತಿಯ ನಿಯಮ ಜಾರಿಗೆ ತರಲಾಗಿದೆ.

Spread the love

Leave a Reply

Your email address will not be published. Required fields are marked *