ಮೂತ್ರ ವಿಸರ್ಜನೆ ತಡೆಗೆ ಕನ್ನಡಿ ಅಳವಡಿಕೆ…! : ಬಿಬಿಎಂಪಿ ನ್ಯೂ ಪ್ಲ್ಯಾನ್..
ಬೆಂಗಳೂರಿನಲ್ಲಿ ಎಲ್ಲಂದ್ರಲ್ಲಿ ಮೂತ್ರ ವಿಸರ್ಜನೆ ಮಾಡವುದನ್ನ ತಪ್ಪಿಸಲು ಬಿಬಿಎಂಪಿ ಹೊಸ ಪ್ಲ್ಯಾನ್ ನನ್ನು ಮಾಡಿದೆ.
ಹೌದು… ಮೂತ್ರ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಕನ್ನಡಿ ಅಳವಡಿಕೆ ಮಾಡಲಾಗಿದೆ. ಗಲೀಜು ಮಾಡಲು ಬಂದರು ತಮ್ಮ ಮುಖ ನೋಡಿಕೊಂಡು ವಾಪಾಸ್ಸು ಹೋಗುತ್ತಾರೆಂದು ಈ ಪ್ಲ್ಯಾನ್ ಮಾಡಿದೆ ಬಿಬಿಎಂಪಿ. ಜೊತೆಗೆ ಕನ್ನಡಿಯಿಂದ ಹಿಂದಿರುವವರಿಗೂ ತಾವು ಮಾಡುವ ಗಲೀಜು ಕಾಣುತ್ತದೆ ಎಂದು ಮೂತ್ರ ವಿಸರ್ಜನೆ ಮಾಡುವುದನ್ನ ನಿಲ್ಲಿಸಬಹುದು ಎಂದು ಈ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ ಎನ್ನಲಾಗಿದೆ.
ಈಗಾಗಲೇ ನಗರದ ಚರ್ಚ್ ಸ್ಟ್ರೀಟ್, ಎಂಜಿ ರೋಡ್ ಹೀಗೆ 10 ರಿಂದ 17 ಪ್ರತಿಷ್ಠಿತ ಸ್ಥಳಗಳಲ್ಲಿ 6/4 ದೊಡ್ಡ ಕನ್ನಡಿಗಳನ್ನು ಅಳವಡಿಸಲಾಗಿದೆ. ಕೆಲವು ಕಡೆ ಕ್ವಾಯಿನ್ ಮೂಲಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಕೆಲವು ಕಡೆ ಈ-ಟಾಯೆಲೆಟ್ ತೆರೆಯಲಾಗಿದೆ. ಹೀಗಿದ್ದರೂ ಜನ ರಸ್ತೆ ಬದಿ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವುದು ನಿಲ್ಲಿಸಿಲ್ಲ. ಹೀಗಾಗಿ ಇಂಥದ್ದೊಂದು ಹೊಸ ಪ್ಲ್ಯಾನ್ ಮಾಡಿದ ಬಿಬಿಎಂಪಿ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.