ಮೂರು ತಿಂಗಳ ಕಾಲ ಸಾಲದ ಇಎಂಐ ಮುಂದೂಡಿಕೆ: RBI ಗವರ್ನರ್‌ ಘೋಷಣೆ

ಕೊರನಾ ಲಾಕ್‌ಡೌನ್‌ ಕಾರಣಕ್ಕೆ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ  ಮೂರು ತಿಂಗಳ ಕಾಲ ಸಾಲದ ಇಎಂಐ ಮುಂದೂಡಿಕೆ ಮಾಡಲಾಗಿದೆ ಎಂದು RBI ಗವರ್ನರ್‌ ಶಕ್ತಿಕಾಂತ್‌ ದಾಸ್‌ ಘೋಷಿಸಿದ್ದಾರೆ.

ಗೃಹಸಾಲ, ವಾಹನಗಳ ಮೇಲಿನ ಸಾಲ, ಚಿನ್ನಾಭರಣಗಳ ಮೇಲಿನ ಸಾಲ, ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು ಎಲ್ಲಾ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ವಯಕ್ತಿಕ ಸಾಲ ಸೇರಿದಂತೆ ಎಲ್ಲಾ ಸಾಲಗಳ ಇಎಂಐ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಇಂದು ಸುದ್ದಿ ಗೋಷ್ಠಿಯಲ್ಲಿ ಈ ವಿಷಯವನ್ನು ಶಕ್ತಿಕಾಂತ್‌ ದಾಸ್‌‌ರವರ ಘೋಷಿಸಿದ್ದು ಇದರಿಂದ ಭಾರತದ ಬಹುತೇಕ ಜನರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಕಾರಣಕ್ಕೆ 21 ದಿನಗಳ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕುಳಿತಿದ್ದ ಲಕ್ಷಾಂತರ ಮಂದಿ ಸಾಲದ ಕಂತು ತೀರಿಸಲು ಚಿಂತಿತರಾಗಿದ್ದರು. ಅವರೆಲ್ಲರೂ ಆರ್‌ಬಿಐನ ಈ ನಿರ್ಧಾರದಿಂದಾಗಿ ಸದ್ಯಕ್ಕೆ ನಿಟ್ಟುಸಿರುಬಿಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights