ಸ್ವೀಟಿಗೆ ಸಿಸಿಬಿ ಡ್ರಿಲ್ : ರಾಧಿಕಾ ಕುಮಾರಸ್ವಾಮಿ ಕೋಟಿ ದುಡ್ಡಿನ ಕಹಾನಿ ಏನು…?
ಯುವರಾಜ್ ಜೊತೆಗಿನ ನಂಟು ಹಿನ್ನೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದ್ದರಿಂದು ಇಂದು ಸ್ವೀಟಿ ವಿಚಾರಣೆಗೆ ಹಾಜರಾಗಿದ್ದಾರೆ.
ಹೌದು… ಕೋಟಿ ಕೋಟಿ ಹಣಕ್ಕೆ ಸಂಬಂಧಿಸಿದಂತೆ ಸಿಕ್ಕಿಬಿದ್ದ ಸ್ವೀಟಿ ರಾಧಿಕಾ ಕುಮಾರಸ್ವಾಂಇಗೆ ಹಣ ಒಂದೇ ಕಂಟಕವಾಗುತ್ತಾ ಅಥವಾ ಆ ಆಡಿಯೋ ಕೂಡ ಕಂಟಕ ತಂದಿಡಲಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಈಗಾಗಲೇ ಸಿಸಿಬಿ ಸ್ವೀಟಿ ಹಣದ ಹಿನ್ನಲೆ ಬಗ್ಗೆ ವಿಚಾರಣೆ ಶುರು ಮಾಡಿದೆ. ಒಂದು ವೇಳೆ ಹಣದ ವಿಚಾರವನ್ನು ಬಿಟ್ಟರೂ ಆಡಿಯೋ ವಿಚಾರದಲ್ಲಿ ರಾಧಕಾ ಸಿಕ್ಕಿಬೀಳ್ತಾರಾ ಎಂಬ ಅನುಮಾನ ಕೂಡ ಮೂಡಿದೆ. ರಾಜಕಾರಣಿಯೊಬ್ಬರ ವಿಚಾರವಾಗಿ ಯುವರಾಜ್ ಮತ್ತು ರಾಧಿಕಾ ನಡುವಿನ ಸಂಭಾಷಣೆಯ ಆಡಿಯೋ ಸಿಸಿಬಿ ಬಳಿ ಇದೆ. ಮೊಬೈಲ್ ಅನ್ನು ರಿಟ್ರೀವ್ ಮಾಡಿದ ಬಳಿಕ ಈ ಆಡಿಯೋ ಸಿಕ್ಕಿದೆ.
ತಿಂಗಳಿಂದ ಸಮ್ಮನಿದ್ದ ಸಿಸಿಬಿ ಈ ಪ್ಲಾನ್ ಮಾಡಿಕೊಂಡಿದೆ. ಯುವರಾಜ್ ಅರೆಸ್ಟ್ ಆಗಿ ತಿಂಗಳಾದರೂ ಸಿಸಿಬಿ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿದ್ದರು. ಯುವರಾಜ್ ಯಾರ್ಯಾರ ಜೊತೆ ಸಂಪರ್ಕ ಹೊಂದಿದ್ದ ಅನ್ನೊ ಕಂಪ್ಲೀಟ್ ಡೀಟೈಲ್ಸ್ ಸಿಸಿಬಿ ಬಿಯಿತ್ತು. ಆದರೆ ಸರ್ಕಾರದ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸಮ್ಮನಾಗಿದ್ದರು ಎಂಬುದಾಗಿ ತಿಳಿದುಬಂದಿದೆ.
ಮೊನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಾಧಿಕಾ, 75 ಲಕ್ಷ ಪಡೆದುಕೊಂಡಿರುವ ಬಗ್ಗೆ ಹೇಳಿದ್ದಾರೆ. ಯುವರಾಜ್ ಹಾಗೂ ಅವರ ಬಾವ 60 ಲಕ್ಷ ಹಣ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಅವರ ಆಸ್ತಿ ಎಷ್ಟು..? ಅವರ ಸಂಪತ್ತೇ ರಾಧಿಕಾಗೆ ಕಂಟಕವಾಗುತ್ತಾ ಎಂಬ ಪ್ರಶ್ನೆ ಕೂಡ ಮೂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಸಾಲೆತ್ತೂರಿನಲ್ಲಿ 3 ಕೋಟಿ ಮೌಲ್ಯದ 1 ಎಕರೆಯಲ್ಲಿ ಮನೆ, ತೋಟ, 60-70 ಲಕ್ಷ ಬೆಲೆ ಬಾಳುವ ಮಂಗಳೂರಿನಲ್ಲಿ ದೇವಸ್ಯ ಹೆಸರಿನ ಮನೆ. ಕಲ್ಲಡ್ಕ ಬಳಿ 4 ಕೋಟಿ ಬೆಲ ಬಾಳುವ ‘ನಂದನವನ’ಹೆಸರಿನ ತೋಟದ ಮನೆ. ಬಹುಕೋಟಿಯ ಸಂಜಯ್ ನಗರದಲ್ಲಿ ಬಂಗಲೆ. ಬೆಂಗಳೂರಿನಲ್ಲೂ ಬಹುಕೋಟಿ ಬೆಲ ಬಾಳುವ ಮನೆ. ಪುತ್ರಿ ಶಮಿಕಾ ಹೆಸರಲ್ಲಿ ನಿರ್ಮಾಣ ಸಂಸ್ಥೆ. ಮಾತ್ರವಲ್ಲದೇ ಕೋಟಿ ಕೋಟಿ ಹಣ ಹೂಡಿಕೆ ಮಾಡಿದ್ದಾರೆ ಎನ್ನುವ ಮಾತಿದೆ.
ಇದೆಲ್ಲದರ ಮಧ್ಯೆ ಜನರಿಗೆ ವಂಚಿಸಿದ್ದ ಯುವರಾಜ್ ಜೊತೆಗಿನ ನಂಟು ಸ್ವೀಟಿಗೆ ಕಂಟಕವಾಗುವ ಸಾಧ್ಯತೆ ಇದೆ. ಯುವರಾಜ್ ನಿಂದ ಹಣ ಪಡೆದ ಉದ್ದೇಶ, ಇದಕ್ಕೆ ಬೇಕಾದ ದಾಖಲಾತಿಗಳನ್ನು ಸರಿಯಾಗಿ ನೀಡಬೇಕಾಗುತ್ತದೆ. ಸಿಸಿಬಿ ವಿಚಾರಣೆ ಬಳಿಕವಷ್ಟೇ ಇದೆಲ್ಲಾ ಬಯಲಾಗಲಿದೆ.

