ಸೋತಿದ್ದೇನೆ ಎಂದು ಒಪ್ಪಿಕೊಂಡ ಟ್ರಂಪ್‌; ಅಧಿಕಾರ ಹಸ್ತಾಂತರಕ್ಕೆ ನಿರ್ಧಾರ

ಡೊನಾಲ್ಡ್‌ ಟ್ರಂಪ್‌ ಬೆಂಬಲಿಗರು ಬುಧವಾರ ಅಮೆರಿಕಾ ಸಂಸತ್‌ ಕಟ್ಟಡ (ಕ್ಯಾಪಿಟಲ್‌) ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದರು. ಸಂಸತ್‌ ಒಳಗೆ ನುಗ್ಗಲು ಯತ್ನಿಸಿದ ಟ್ರಂಪ್ ಬೆಂಬಲಿಗರನ್ನು ಪೊಲೀಸರು ತಡೆದಿದ್ದರು. ಈ ನಡುವೆ ಅಮೆರಿಕಾ ಕಾಂಗ್ರೆಸ್‌ ಜೋ ಬೈಡೆನ್ ಮತ್ತು ಕಮಲಾ ಹ್ಯಾರೀಸ್‌ ಗೆದ್ದಿದ್ದಾರೆ ಎಂದು ಅಂಗೀಕರಿಸಿತು. ಈ ಎಲ್ಲಾ ಬೆಳವಣಿಗೆಗಳ ನಂತರ ಸೋಲೊಪ್ಪಿಕೊಂಡಿರುವ ಟ್ರಂಪ್, ಅಧಿಕಾರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ.

ಸುಗಮ, ಕ್ರಮಬದ್ಧ ಹಾಗೂ ತಡೆರಹಿತವಾಗಿ ಅಧಿಕಾರವನ್ನು ಹಸ್ತಾಂತರಿಸುತ್ತೇನೆ. ಅಮೆರಿಕ ಕಾಂಗ್ರೆಸ್ ಚುನಾವಣೆ ಫಲಿತಾಂಶಗಳನ್ನು ಪ್ರಮಾಣೀಕರಿಸಿದೆ. ಹೊಸ ಆಡಳಿತ ಜನವರಿ 20ರಂದು ಚಾಲನೆಯಾಗಲಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಅಮೆರಿಕಾ ಕ್ಯಾಪಿಟಲ್‌ ಮೇಲೆ ನಡೆದಿರುವ ದಾಳಿ ಖಂಡನೀಯ. ಸಂಸತ್‌ ಕಟ್ಟಡದ ಬಳಿ ನಡೆದ ಕೂಡಾ ಹಿಂಸಾಚಾರ, ಕಾನೂನುಬಾಹಿರತೆ ಮತ್ತು ಹಾನಿಕರ ಘಟನೆಯಿಂದ ಎಲ್ಲ ಅಮೆರಿಕನ್ನರಂತೆ ನಾನು  ಅಸಮಾಧಾನಗೊಂಡಿದ್ದೇನೆ. ಅಮೆರಿಕ ಕ್ಯಾಪಿಟಲ್ ಕಟ್ಟಡವನ್ನು ಸುರಕ್ಷಿತವಾಗಿರಿಸಲು ಮತ್ತು ಒಳನುಗ್ಗಿದ ಪ್ರತಿಭಟನಕಾರರನ್ನು ಹೊರಹಾಕಲು ತಕ್ಷಣ ನ್ಯಾಷನಲ್ ಗಾರ್ಡ್ ನಿಯೋಜಿಸಿ ಫೆಡರಲ್ ಕಾನೂನು ಜಾರಿಗೊಳಿಸಿದ್ದೇನೆ ಎಂದು ಹೇಳಿದ್ದಾರೆ.

ಬುಧವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು.


ಇದನ್ನೂ ಓದಿ: ಅಮೆರಿಕ ಸಂಸತ್ತಿನ ಹೊರಗಡೆ ದಾಂಧಲೆ ಸಮಯದಲ್ಲಿ ಹಾರಾಡಿದ ಭಾರತದ ಧ್ವಜ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights