ಅಮೆರಿಕ ಸಂಸತ್ತಿನ ಹೊರಗಡೆ ದಾಂಧಲೆ ಸಮಯದಲ್ಲಿ ಹಾರಾಡಿದ ಭಾರತದ ಧ್ವಜ..!

ಅಮೆರಿಕಾದಲ್ಲಿ ಸಾವಿರಾರು ಟ್ರಂಪ್ ಬೆಂಬಲಿಗರು ನಡೆಸಿದ ಪ್ರತಿಭಟನಾ ರ್ಯಾಲಿ ವೇಳೆ ಯುವಕನೋರ್ವ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಾತ್ರವಲ್ಲ ಈ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದ್ದು ನಾಲ್ವರು ಮೃತಪಟ್ಟಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡೆನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮದಲ್ಲಿ, ಅಮೆರಿಕ ಸಂಸತ್ತಿನ ಹೊರಗಡೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದರು. ಈ ದಾಂಧಲೆ ಸಮಯದಲ್ಲಿ ಭಾತರದ ಧ್ವಜ ಕಾಣಿಸಿಕೊಂಡಿದ್ದು ವ್ಯಾಪಕ ಖಂಡನೆಗೊಳಗಾಗಿದೆ.

ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಟ್ರಂಪ್ ಪರಾಜಯಗೊಂಡಿದ್ದರಾದರು, ತನ್ನ ಸೋಲನ್ನು ಅವರು ನಿರಾಕರಿಸುತ್ತಲೇ ಬಂದಿದ್ದರು. ಅವರ ಎದುರಾಳಿ ಜೋ ಬೈಡೆನ್ ಅವರ ಗೆಲುವನ್ನು ಅಮೆರಿಕ ಸಂಸತ್ತು ಗುರುವಾರ ಪ್ರಾಮಾಣಿಕರಿಸಿದೆ. ಆದರೆ ಸಂಸತ್ತಿನಲ್ಲಿ ಈ ಪ್ರಕ್ರಿಯೆ ನಡೆಯುವುದಕ್ಕಿಂಲೂ ಮುಂಚೆ, ಸಂಸತ್ತಿನ ಹೊರಗಡೆ ಟ್ರಂಪ್ ಬೆಂಬಲಿಗರು ಸಂಸತ್ತಿನ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಇದರಿಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ನಾಲ್ಕು ಜನರು ಮೃತಪಟ್ಟಿದ್ದಾರೆ.

ಪ್ರಧಾನಿ ಮೋದಿ ದಾಳಿಯನ್ನು ಖಂಡಿದ್ದು, “ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ಬೇಸರಗೊಂಡೆ. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಆದರೆ ಇದೀಗ ಈ ದಾಂದಲೆ ನಡೆಸುವ ಸಮಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲಾಗಿದೆ. ಘಟನೆಯನ್ನು ಹಲವಾರು ಭಾರತೀಯರು ವಿರೋಧಿಸಿದ್ದಾರೆ. ಬಿಜೆಪಿ ನಾಯಕ ವರುಣ್ ಗಾಂಧಿ, “ಅಲ್ಲಿ ಭಾರತೀಯ ಧ್ವಜ ಯಾಕಿದೆ ? ಖಂಡಿತವಾಗಿಯೂ ಇದು ನಾವು ಭಾಗವಹಿಸಬೇಕಾದ ಹೋರಾಟವಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ವರುಣ್ ಗಾಂಧಿ ಟ್ವೀಟನ್ನು ರೀಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿತರೂರ್‌, “ವರುಣ್‌ ಗಾಂಧಿಯವರೇ, ದುರದೃಷ್ಟವಾತ್‌, ಕೆಲವು ಭಾರತೀಯರು ಕೂಡಾ ಟ್ರಂಪ್‌ ಬೆಂಬಲಿಗರ ಹಾಗೆ ಗುಂಪು ಹಿಂಸಾಚಾರ ಬೆಂಬಲಿಸುವ ಮನಸ್ಥಿತಿಯವರೆ ಆಗಿದ್ದಾರೆ. ಬಾವುಟವನ್ನು ಹೆಮ್ಮೆಯ ಸಂಕೇತವಾಗಿ ಬಳಸದೇ ಅದನ್ನು ಅಸ್ತ್ರವನ್ನಾಗಿ ಬಳಸಲು ಬಯಸುತ್ತಾರೆ. ಯಾರೆಲ್ಲಾ ಅದನ್ನು ಒಪ್ಪುವುದಿಲ್ಲವೋ ಅವರೆಲ್ಲರೂ ರಾಷ್ಟ್ರ ವಿರೋಧಿಗಳು ಮತ್ತು ದೇಶದ್ರೋಹಿಳೆಂದು ಹೇಳುತ್ತಾರೆ. ಆ ಭಾವುಟ ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ” ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿಯು ರಾಷ್ಟ್ರದ ಸಂಕೇತಗಳನ್ನು ಬಳಸಿಕೊಂಡು ಅವರ ವಿರೋಧಿಗಳನ್ನು ಹಣಿಯುತ್ತಿರುವುದನ್ನು ಶಶಿ ತರೂರು ಇಲ್ಲಿ ಉಲ್ಲೇಖಿಸಿದ್ದಾರೆ.

ಪ್ರವೀಣ್ ಕುಮಾರ್‌ ರಾಜೇಂದ್ರನ್, “ಆಂತರಿಕ ಗಲಭೆಯ ಸಂದರ್ಭದಲ್ಲಿ ಭಾರತೀಯ ಧ್ವಜದ ಹಾರಾಟ ನಡೆಸಿರುವವರ ವೀಸಾವನ್ನು ಅಮೆರಿಕ ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

ತಿಲಕ್ ಅವರು, “ದೊಡ್ಡ ಗುಂಪಿನಲ್ಲಿರುವ ಮೂರ್ಖ ಜನರ ಶಕ್ತಿಯನ್ನು ಕಡೆಗಣಿಸಬೇಡಿ. ವಿಶ್ವದ ಹಳೆಯ ಪ್ರಜಾಪ್ರಭುತ್ವದ ಸಂಸತ್ತಿನ ಮೇಲೆ ನಡೆದ ದಾಳಿಗೆ ಶತಮೂರ್ಖ ಅನಿವಾಸಿಯೊಬ್ಬ ಭಾರತೀಯ ಧ್ವಜವನ್ನು ಹಿಡಿದಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.

ಪ್ರಧಾನಿ ಮೋದಿಯ ಖಂಡನೆಗೆ ಕೆಲವರು ಆಕ್ಷೇಪ ವ್ಯಕ್ತಪಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಶೀವತ್ಸ ಅವರು, “‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ಗೆ ಏನಾಯಿತು? ನಿಮ್ಮ ‘ಪ್ರೇಂಡ್‌‌’ ಗಾಗಿ ನೀವು ಪ್ರಚಾರ ಮಾಡಿ ನಮ್ಮ ವಿದೇಶಾಂಗ ನೀತಿಯನ್ನು ಕುಗ್ಗಿಸಲಿಲ್ಲವೇ? ಭಾರತದಲ್ಲಿ ಕೊರೊನಾ ಹರಡುತ್ತಿರುವಾಗ, ನೀವು ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ₹ 100 ಕೋಟಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂತರನ್‌ಆಫ್‌ ಎಂಬ ಟ್ವಿಟ್ಟರ್‌ ಹ್ಯಾಂಡಲ್‌, ಬಿಜೆಪಿ ನಾಯಕ ವರುಣ್ ಗಾಂಧಿ ಟ್ವೀಟ್‌ಗೆ ಅಧ್ಯಕ್ಷೀಯ ಚುನಾವಣೆಗಿಂತಲೂ ಮುಂಚೆ ಪ್ರಧಾನಿ ಮೋದಿ ಅಲ್ಲಿನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಟ್ರಂಪ್ ಪರ ಪ್ರಚಾರ ಮಾಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights