ಭಾರತ vs ಆಸ್ಟ್ರೇಲಿಯಾ: ಸುಲಭ ಕ್ಯಾಚ್ ಕೈಬಿಟ್ಟ ರಹಾನೆ ಪಡೆ! ಮೊದಲ ದಿನ ಆಸಿಸ್ 166/2!

ಮಳೆಯ ನಡುವೆಯೇ ಕುಂಟುತ್ತಾ ಸಾಗಿದ ಮೋರನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಇದಕ್ಕೆ ಮುಖ್ಯಕಾರಣ ಟೀಮ್ ಇಂಡಿಯಾ ಕೈಚಲ್ಲಿದೆ ಅವಕಾಶಗಳು. ಸುಲಭ ಕ್ಯಾಚ್ ಗಳನ್ನು ಕೈಬಿಟ್ಟ ರಹಾನೆ ಪಡೆ ಅದಕ್ಕೆ ಬೆಲೆ ತೆತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 55 ಓವರುಗಳ ಮೊದಲ ದಿನದ ಆಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 166 ರನ್ ಮಾಡಿದೆ.

ಮಧ್ಯಮದ ಕ್ರಮಾಂಕದ ಆಟಗಾರರಾದ ಮಾರ್ನಸ್ ಲಬುಶೇನ್ 67 ರನ್ ಮಾಡಿದ್ದರೇ, ಮಾಜಿ ನಾಯಕ ಸ್ಟೀವ್ ಸ್ಮಿತ್ 31 ರನ್ ಮಾಡಿ ಆಡುತ್ತಿದ್ದಾರೆ.

ಎರಡನೇ ಪಂದ್ಯದಲ್ಲಿ ಸೋತು ಸುಣ್ಣವಾಗಿದ್ದ ಆಸ್ಟ್ರೇಲಿಯಾ ಈ ಭರ್ಜರಿ ಆರಂಭ ಪಡೆಯಲು ಭಾರತದ ಧಾರಾಳತನವೇ ಮುಖ್ಯ ಕಾರಣವಾಯಿತು. ಇದೇ ಮೊದಲ ಪಂದ್ಯ ಆಡುತ್ತಿರುವ ಆಠರಂಭಿಕ ಆಟಗಾರ ವಿಲ್ ಪೊಕೋವ್ಸ್ಕಿಗೆ ಜೀವದಾನಗಳ ವರದಾನವನ್ನೇ ನೀಡಿದ ಭಾರತ ಅದಕ್ಕೆ ತಕ್ಕ ಬೆಲೆ ತರಬೇಕಾಗಿ ಬಂತು.

ವಿಕೆಟ್ ಕೀಪರ್‍ ರಿಶಬ್ ಪಂತ್ ಅವರ ತೂತು ಬಿದ್ದ ಕೈಗಳ ಸಂಪೂರ್ಣ ಲಾಭ ಪಡೆದ ಪುಕೋವ್ಸ್ಕಿ ಅರ್ಧ ಶತಕದೊಂದಿಗೆ (62) ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕೊನೆಗೆ ಮತ್ತೋರ್ವ ಚೊಚ್ಚಲಿಗ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು.

ಮೊದಲ ದಿನ ಪತನಗೊಂಡು ಆಸ್ಟ್ರೇಳಿಯಾದ ಎರಡು ವಿಕೆಟ್‌ಗಳನ್ನು ಮೊಹಮದ್ ಸಿರಾಜ್ ಹಾಗೂ ನವದೀಪ್ ಸೈನಿ ಹಂಚಿಕೊಂಡರು.

Spread the love

Leave a Reply

Your email address will not be published. Required fields are marked *